ಚಳ್ಳಕೆರೆ :
ಚಿತ್ರದುರ್ಗ: ಬಾಣಂತಿ ಸಾವು ಕ್ರಮಕ್ಕೆ ಕನ್ನಡ ಪರ
ಸಂಘಟನೆ ಪ್ರತಿಭಟನೆ
ಬಾಣಂತಿಯ ಸಾವಿಗೆ ಕಾರಣರಾದವರ ಮೇಲೆ ಕಾನೂನು ರೀತಿ
ಕ್ರಮಜರುಗಿಸಿ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು
ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ
ಕಾರ್ಯಕರ್ತರು ಇಂದು ಆರೋಗ್ಯಾಧಿಕಾರಿ ಕಚೇರಿ ಮುಂದೆ
ಪ್ರತಿಭಟನೆ ನಡೆಸಿದರು. ವೈದ್ಯರ ನಿರ್ಲಕ್ಷತೆಯಿಂದಾಗಿ ಬಾಣಂತಿ
ಸಾವಾಗಿದೆ. ಹೆರಿಗೆಯಾದ ನಂತರ ಚಿಕಿತ್ಸೆ ನೀಡಿಲ್ಲ.
ಆಸ್ಪತ್ರೆಗೆ
ಬಂದಾಗಲೂ ಸರಿಯಾಗಿ ನೋಡದೆ ನಿರ್ಲಕ್ಷಿಸಿದ್ದಾರೆ. ಬಾಣಂತಿ
ಸಾವಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮಕ್ಕೆ
ಒತ್ತಾಯಿಸಿದರು.