ಚಳ್ಳಕೆರೆ ಡಿ.12
ಭಾರತ ದೇಶ ಪ್ರಪಂಚದ ಸಕಲ ದೇಶಗಳಿಗೆ ಮಾತೃ ದೇಶ.
ಪ್ರಾಚೀನ ದೇಶ. ವಿಶ್ವಗುರು ದೇಶ, ಅನಾದಿ ದೇಶವಾದ
ಭಾರತದ ಮೂಲ ಸಂಸ್ಕೃತಿ ಆದ ದೈವಿ ಸಂಸ್ಕೃತಿಯು
ಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಮಾದರಿ. ಪರಮಾತ್ಮನ
ಅವತರಣೆಯ ಭೂಮಿ ಎನ್ನುವ ಬಿರುದಿರುವ ಭಾಗ್ಯ
ಕೇವಲ ಭಾರತ ದೇಶಕ್ಕೆ ಮಾತ್ರ. ಭಾರತ ದೇಶ ದೇವತೆಗಳ
ಜನ್ಮಭೂಮಿ ದೇವತೆಗಳು ಆಳಿದ ಪವಿತ್ರ ಭೂಮಿ, ಸೃಷ್ಟಿ
ಎನ್ನುವ ರಂಗಮಂಟಪದ ಮೇಲೆ ಹೀರೋ ಪಾತ್ರಧಾರಿ
ದೇಶವೇ ಭಾರತ. ಸಕಲ ಧರ್ಮಗಳನ್ನು ಏಕತೆ ಸೂತ್ರದಲ್ಲಿ
ಬೆಸೆಯುವ ಸದ್ಗುಣಗಳ ಸಮರ್ಥತೆ ತುಂಬಿರುವ
ಧರ್ಮವೇ ಭಾರತದ ಆದಿ ಸನಾತನ ದೇವಿ ದೇವತಾ
ಧರ್ಮ. ದೇವತಾ ಧರ್ಮದಲ್ಲಿ ಶಾಂತಿ, ಆನಂದ, ಪ್ರೇಮ,
ಹಿರಿಯರಿಗೆ ಗೌರವ, ಸಂತುಷ್ಟತೆಯ ವ್ಯವಹಾರ, ನಮ್ರತೆ,
ಮಧುರತೆ ಎನ್ನುವ ಅಮೂಲ್ಯ ಜೀವನ ಮೌಲ್ಯಗಳು
ಜೀವನದ ಶೃಂಗಾರ ಎನ್ನುವುದನ್ನು ಬೋಧಿಸಿದ ಪ್ರಥಮ
ದೇಶವೇ ಭಾರತ .
ಹಾಗಾದರೆ ಭಾರತಕ್ಕೆ ನಿತ್ಯ ಶಕ್ತಿ ಸಿಕ್ಕಿರುವುದು ಎಲ್ಲಿಂದ?
ಯಾರಿಂದ? ವಿಶ್ವಕ್ಕೇನೆ ಬೆಳಕು ನೀಡಿದ ಭಾರತಕ್ಕೆ ಪ್ರಕಾಶ
ನೀಡುವ ಅತ್ಯುನ್ನತ ಗ್ರಂಥವೇ ಶ್ರೀಮದ್ ಭಗವದ್ಗೀತೆ.
ಸರ್ವಶಾಸ್ತ್ರಗಳ ಶಿರೋಮಣಿ ಭಗವದ್ಗೀತೆ. ಭಾರತ ದೇಶದ
ಶಕ್ತಿಶಾಲಿ ನೈತಿಕ ಗ್ರಂಥ ಶ್ರೀಮದ್ ಭಗವದ್ಗೀತೆ
.ರಹಸ್ಯಯುಕ್ತ ಕರ್ಮದ ಗತಿಯನ್ನು ಬೋಧಿಸುವ ಗ್ರಂಥ
ಶ್ರೀಮದ್ ಭಗವದ್ಗೀತೆ ಏಕಾಗ್ರತೆಯ ಧ್ಯಾನವನ್ನು
ಬೋಧಿಸುವ ಗ್ರಂಥ ಶ್ರೀಮದ್ ಭಗವದ್ಗೀತೆ
ಇಂತಹ ಶ್ರೀಮದ್ ಭಗವದ್ಗೀತಾ ಜಯಂತಿ ಅಂಗವಾಗಿ
ಹಲವು ಕಣ್ಣುಗಳ ಮುಂದೆ ಶ್ರೀ ಕೃಷ್ಣ ಎಂಬ
ವಿಚಾರಗೋಷ್ಠಿಯನ್ನು 14/12/2024 ಶನಿವಾರದಂದು
ಸಂಜೆ 6:00 ಗಂಟೆಗೆ ರೋಟರಿ ಕ್ಲಬ್ ಹಿಂಬಾಗದಲ್ಲಿ ಎಸ್
ಆರ್ ರಸ್ತೆಯಲ್ಲಿ ಬರುವ ಪ್ರಜಾಪಿತ ಬ್ರಹ್ಮಕುಮಾರಿ
ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಸಮಸ್ತ ಭಗವದ್ಗೀತಾ ಪಾಠಕರು, ಭಗವದ್ಗೀತಾ
ಪ್ರಿಯರು ಸರ್ವರಿಗೂ ಹೃದಯಪೂರ್ವಕ ಸ್ವಾಗತ
ಬನ್ನಿ ಭಗವದ್ಗೀತೆಯನ್ನು ಅರಿಯಿರಿ ಭಗವಂತನನ್ನು
ದರ್ಶಿಸಿರಿ ಬ್ರಹ್ಮಕುಮಾರಿ ಈಶ್ವರಿವಿದ್ಯಾಲಯ ಚಳ್ಳಕೆರೆ
ವಿಮಲಕ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.