ಚಳ್ಳಕೆರೆ ಡಿ.3 ಮನೆಮುಂದೆ ಹುಡುಗರೊಂದಿಗೆ
ಆಟವಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತಪಟ್ಟ
ಘಟನೆ ನಡೆದಿದೆ.
.
ಹೌದು ಇದು ಚಳ್ಳಕೆರೆ ನಗರದ ಹಳೆ ಟೌನ್ ನಿವಾಸಿ
ಶ್ರೀನಿವಾಸ್ ಪುತ್ರ ಸೃಜನ್ ವಾರಿಯರ್ ವಿದ್ಯಾಸಂಸ್ಥೆಯಲ್ಲಿ
9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಂದು
ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದು ಅಕಾಲಿಕ
ಮಳೆಯಿಂದಾಗಿ ಮುಂಜಾಗ್ರತೆಯ ಸುರಕ್ಷತೆಗಾಗಿ
ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಾಡಿದ ಬೆನ್ನಲ್ಲೇ ಶಾಲಾ ಆಡಳಿತ ಶಾಲೆಗೆ ರಜೆ
ಘೋಷಣೆ ಮಾಡಿ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ್ದಾರೆ.
ಮನೆಗೆ ಹೋದ ವಿದ್ಯಾರ್ಥಿ ಮನೆ ಮುಂದೆ ಸುಮಾರು 12
ಗಂಟೆ ಸುಮಾರಿನಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ
ತಲೆ ಸುತ್ತು ಬಂದಿದೆ ಎಂದು ಕುಸಿದು ವಿದ್ದು ವಿದ್ಯಾರ್ಥಿ
ಮೃತಮಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.