ಚಳ್ಳಕೆರೆ:-ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉನ್ನತ ಮಟ್ಟದ ಗುರಿ ಇಟ್ಟುಕೊಂಡು ಸತತ ಪ್ರಯತ್ನ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದು ಚಳ್ಳಕೆರೆಯ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಸತೀಶನಾಯ್ಕ್ ತಿಳಿಸಿದರು.

ನಗರದ ಅಜ್ಜನಗುಡಿ ರಸ್ತೆಯ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ “ವಿಗಮ್ “(VIGAM)ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದ್ದ “ಬೀಳ್ಕೊಡುಗೆ ಮತ್ತು ದೀಪದಾನ” ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಮಹಾಪುರುಷರು ಮಹತ್ವದ ಸಾಧನೆಗಳನ್ನು ಮಾಡಲು ಅವರು ಯಾವಾಗಲೂ ದೊಡ್ಡ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು,ಅದೇ ರೀತಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ನೀವು ನಿಮ್ಮ ಜೀವನದಲ್ಲಿ ಉನ್ನತ ಮಟ್ಟದ ಒಂದು ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಿದರೆ ಖಂಡಿತವಾಗಿಯೂ ಮಹತ್ವದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಮ್ಮ ಜೀವನದ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದರು.

ನಾನು ಆರಂಭದಲ್ಲಿ ಒಬ್ಬ ಶಿಕ್ಷಕನಾಗಿ ನನ್ನ ವೃತ್ತಿ ಜೀವನವನ್ನು ಆರಂಭಿಸಿದ್ದೆ,ನಂತರದ ಸನ್ನಿವೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಇಂದು ಪೊಲೀಸ್ ಇಲಾಖೆಯಲ್ಲಿ ಜನರ ಸೇವೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ,ಅದೇ ರೀತಿಯಲ್ಲಿ ಎರಡು ವರ್ಷಗಳ ಬಿ.ಇಡಿ ಪದವಿಯನ್ನು ಮುಗಿಸುತ್ತಿರುವ ನೀವು ಆದರ್ಶ ಶಿಕ್ಷಕರಾಗಿ ಉತ್ತಮ ಸೇವೆ ಮಾಡಿ ಎಂದು ಅವರು ಕಿವಿಮಾತು ಹೇಳಿದರು.

ಈ ಬೀಳ್ಕೊಡುಗೆ ಕಾರ್ಯಕ್ರಮದ ಬಗ್ಗೆ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎನ್ ಎಲ್ ಹೇಮಂತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ “ದೀಪದಾನದ ಪ್ರತಿಜ್ಞಾ ವಿಧಿ”ಯನ್ನು ಬೋಧಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಉಪನ್ಯಾಸಕ ಜಿ.ಎಸ್ ರಾಘವೇಂದ್ರ ನಾಯಕ್ ಅವರು “ಶಿಕ್ಷಕ ವೃತ್ತಿ ಎನ್ನುವುದು ಬಹಳ ಪವಿತ್ರವಾದ ಸೇವೆಯಾಗಿದ್ದು ಅದನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸುವಂತೆ ತಿಳಿಸಿದರು. ಬೀಳ್ಕೊಡುಗೆ ಸಮಾರಂಭದ ಬಗ್ಗೆ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಕೆ.ಬಿ ರವಿಕುಮಾರ್, ಜಿ ದೊರೆಸ್ವಾಮಿ,ಬಿ.ಆರ್ ಕಲ್ಲೇಶ್,ಸಿ.ಎಸ್ ಶ್ಯಾಮಸುಂದರ್, ಕಚೇರಿ ಅಧೀಕ್ಷಕರಾದ ಎಂ.ಎಸ್ ವಾಣಿಶ್ರೀ ಅವರು ಮಾತನಾಡಿ ಕಾಲೇಜಿನಂದ ನಿರ್ಗಮಿಸುತ್ತಿರುವ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶುಭಹಾರೈಸಿದರು.ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಡಿ.ಆರ್ ಪ್ರಮೀಳ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ 2022-2023ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಬುಜ್ಜಮ್ಮ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.ಈ ಬೀಳ್ಕೊಡುಗೆ ಸಮಾರಂಭದಲ್ಲಿ ಉಪನ್ಯಾಸಕರಾದ ವಿ.ವಿಶ್ವನಾಥ್, ಪ್ರಶಿಕ್ಷಣಾರ್ಥಿಗಳಾದ ಯತೀಶ್ ಎಂ ಸಿದ್ದಾಪುರ,ಬಾಲಾಜೀ, ದಿನೇಶ್,ಜಾಫರ್, ಆಕಾಶ್,ಶಶಿಕಲಾ, ಪಲ್ಲವಿ,ಮುನಿತ, ನಾಗರತ್ನ,ರವಿಸ್ವಾಮಿ,ಮನೋಜ್, ಮುಂತಾದ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!