ಚಳ್ಳಕೆರೆ :
ಚಿತ್ರದುರ್ಗ: ರೈತರು ಪ್ರತಿಷ್ಠೆ ಬಿಟ್ಟು ಒಂದಾಗಬೇಕು
ರೈತರು ಒಗ್ಗಟ್ಟಿನಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು,
ಆದ್ದರಿಂದ ರೈತರು ತಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಒಂದಾಗಬೇಕೆಂದು
ಸರ್ವೋದಯ ಪಕ್ಷದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿ
ಹೇಳಿದರು.
ಚಿತ್ರದುರ್ಗದಲ್ಲಿ ನಡೆದ ರೈತರ
ಸಮಾವೇಶದಲ್ಲಿ ಮಾತಾಡಿ, ರೈತರು ಒಗ್ಗಟ್ಟಿನಿಂದ ಹೋರಾಟ
ಮಾಡಿದ್ದರಿಂದಾಗಿ ಮೂರುಕರಾಳ ರೈತ ವಿರೋಧಿ ಕಾಯ್ದೆಗಳನ್ನು
ರದ್ದು ಮಾಡಿಸುವಲ್ಲಿ ಯಶ ಕಂಡರು.
ರೈತರ ಬೆಳೆಗೆ ಸರಿಯಾದ
ಬೆಲೆ ಸಿಗದಿದ್ದರಿಂದ ರೈತ ಸಾಲ ಮಾಡಿ ಆತ್ಮಹತ್ಯೆಯತ್ತ ಮುಖ
ಮಾಡಿದ್ದಾನೆಂದರು.