ಚಳ್ಳಕೆರೆ : 1930ರ ದಶಕದಲ್ಲಿ ಭಾರತೀಯ ರಾಜಕೀಯದಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪ್ರಮುಖ ಪತ್ರವಾಗಿತ್ತು. ಕಾಂಗ್ರೆಸ್ ನಾಯಕತ್ವದಲ್ಲಿ, 1937ರ ಪ್ರಾಂತೀಯ ಚುನಾವಣೆಯನ್ನು ಮುನ್ನಡೆಸಿ ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರವನ್ನು ರಚಿಸಿದಾಗ ಅವರ “ಜಾತ್ಯತೀತ ರಾಷ್ಟ್ರ/-ದೇಶದ” ಅವರ ಕಲ್ಪನೆಯನ್ನು ಜನರು ಬೆಂಬಲಿಸುವಂತೆ ಕಂಡುಬಂತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಹೇಳಿದರು.
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಜವಾಹರಲಾಲ್ ನೆಹರುರವರ 58ನೇ ಪುಣ್ಯಸ್ಮರಣೆ ದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ 1947-1964 ಅವರು ಭಾರತದ ಅವರ ದೃಷ್ಟಿಕೋನದ ರಾಷ್ಟ್ರವನ್ನು ಸಾಧಿಸಲು ಹೊರಟರು. 1950 ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು, ನಂತರ ಅವರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದರು ಎಂದರು.
ಮಾಜಿ ತಾಪಂ.ಸದಸ್ಯ ಗಿರಿಯಪ್ಪ ಮಾತನಾಡಿ, ಭಾರತವು ಒಂದು ವಸಾಹತು-ದೇಶದಿಂದ ಗಣರಾಜ್ಯವಾಗುದವರೆಗಿನ ರೂಪಾಂತರಕ್ಕೆ ಸಾಕ್ಷಯೂ ಕಾರಣೀಭೂತರೂ ಆದರು, ಬಹುಸಿದ್ಧಾತಗಳ ಬಹು ರಾಜಕೀಯ ಪಕ್ಷಗಳ (ಮಲ್ಟಿ-ಪಾರ್ಟಿ ಸಿಸ್ಟಮ್) ವ್ಯವಸ್ಥೆಯ ಪೋಷಣೆ ಮಾಡಿದರು. ನೆಹರೂ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯವನ್ನು ನಿಯಂತ್ರಿಸುತ್ತಾ, 1951, 1957, ಮತ್ತು 1962 ರಲ್ಲಿ ಸತತ ಚುನಾವಣೆಯನ್ನು ಗೆದ್ದುಕೊಂಡು ಎಲ್ಲಾ ಪಕ್ಷಗಳನ್ನು ಮೀರಿಸಿದ (ಕ್ಯಾಚ್-ಆಲ್) ಪಕ್ಷವಾಗಿ ಹೊರಹೊಮ್ಮಿತು ಎಂದರು.
ಈದೇ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಜರಿದ್ದರು.