ಚಳ್ಳಕೆರೆ : ಪ್ರತಿ ಮನೆಯ ಸದಸ್ಯರು ಮನೆಯ ಶೌಚಾಲಯ ಬಳಸುವುದರ ಮೂಲಕ ಬಯಲು ಶೌಚಾದ ಅಪಾಯಗಳಾದ ಕ್ರಿಮಿಕೀಟ, ಸರಿಸೃಪಗಳಿಂದ ರಕ್ಷಣೆ ಪಡೆಯುವಂತಾಗಿದೆ ಆದ್ದರಿಂದ ಬಯಲು ಮುಕ್ತ ಶೌಚಾಲಯ ಸ್ವಚ್ಛ ಪರಿಸರ ನಿರ್ಮಾಣ ಮಾಡೋಣ ಎಂದು ಘಟಪರ್ತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿಡಿಒ ಹೊನ್ನೂರಪ್ಪ ಹೇಳಿದರು..
ಅವರು ತಾಲೂಕಿನ ತಳಕು ಹೋಬಳಿಯ ಘಟಪರ್ತಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಶೌಚಾಲಯ ದಿನಾಚರಣೆ ಅಂಗವಾಗಿ ಮನೆ ಮನೆಗೆ ಭೇಟಿ ನೀಡಿ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಿದರು..
ಇನ್ನು ಪ್ರತಿ ಮನೆಯ ಸದಸ್ಯರು ತಮ್ಮ ಮನೆಯ ಇತ್ತಲಿನಲ್ಲಿ ಶೌಚ ಗೃಹವನ್ನು ನಿರ್ಮಿಸಿಕೊಳ್ಳುವುದರ ಮೂಲಕ ಬಯಲು ಶೌಚಕ್ಕೆ ನಾಂದಿ ಹಾಡಬೇಕು, ಎಲ್ಲರೂ ಕೂಡ ತಮ್ಮ ಬಯಲು ಸಚ್ಚವನ್ನು ಬಹಿಷ್ಕರಿಸಿ ಮನೆಯಲ್ಲಿ ಇರುವಂತಹ ಶೌಚಾಲಯವನ್ನು ಬಳಸಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಹೇಳಿದರು.
ಘಟಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನೂರು, ಘಟಪರ್ತಿ, ಅಜ್ಜನಹಳ್ಳಿ, ಚನ್ನಗಾನಹಳ್ಳಿ , ಭೋಗನಹಳ್ಳಿ, ವಲಸೆ ಹೀಗೆ ಆರು ಗ್ರಾಮಗಳಲ್ಲಿ ಆಂದೋಲನದ ಮೂಲಕ ನಮ್ಮ ಶೌಚಾಲಯ ನಮ್ಮ ಹೆಮ್ಮೆ ಎಂಬ ವಿನೂತ ಕಾರ್ಯಕ್ರಮದಲ್ಲಿ ಶೌಚಾಲಯ ಬಳಕೆಯಿಂದ ಆಗುವ ಉಪಯೋಗಗಳನ್ನು ಸಾರ್ವಜನಿಕ ತಿಳಿಸುತ್ತಾ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಮಹಿಳೆಯರ, ಮತ್ತು ಮಕ್ಕಳ ಘನತೆ ಆರೋಗ್ಯ ರಕ್ಷಣೆ , ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟುಕೆ ಈ ಎಲ್ಲಾ ಕ್ರಮಗಳ ಮೂಲಕ ನಮ್ಮ ಶೌಚಾಲಯ ನಮ್ಮ ಹೆಮ್ಮೆ ಆಂದೋಲನ ಆಚರಿಸಿದ್ದರು.