ಚಳ್ಳಕೆರೆ : ಪಟ್ಟಣ ಪಂಚಾಯಿತಿಯ ಕೌನ್ಸಿಲ್ ಸಭಾಂಗಣದಲ್ಲಿ ೨೦೨೫-೨೬ನೇ ಸಾಲಿನ ಆಯ-ವ್ಯಯಾ ಕುರಿತಂತೆ ೧ನೇ ಪೂರ್ವಭಾವಿ ಸಭೆಯು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಅಧ್ಯಕ್ಷೆತೆಯಲ್ಲಿ ನಡೆಯಿತು.
೫ನೇ ವಾರ್ಡ್ನ ನಿವಾಸಿಯಾದ ಮಾರುತಿ ಮಾತನಾಡಿ ನಮ್ಮ ವಾರ್ಡ್ನಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಸಿಸಿ ರಸ್ತೆ, ಚರಂಡಿ, ಪೈಪ್‌ಲೈನ್, ಇಲ್ಲ ಎಂದು ಪ.ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಿವಾಸಯವರಿಗೆ ಮನವಿ ಮಾಡಿಕೊಂಡರು.
ಪ.ಪA ಸದಸ್ಯ ಎನ್.ಮಹಂತಣ್ಣ ಮಾತನಾಡಿ ರುದ್ರಭೂಮಿ ಪಟ್ಟಣದಿಂದ ದೂರವಿರುವುದರಿಂದ ಮುಕ್ತಿವಾಹನಕ್ಕೆ ಬಜೆಟ್‌ನಲ್ಲಿ ಮೀಸಲಿಡಿ ಎಂದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದಾಗ ಎಲ್ಲಾ ಸದಸ್ಯರಿಗೆ ಮಾಹಿತಿ ಒದಗಿಸುವಂತೆ, ೧೪ನೇ ವಾರ್ಡ್ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪಟ್ಟಣ ಪಂಚಾಯಿತಿಯಿAದ ದುರಸ್ಥೆ ಮಾಡಿಸಿ, ಗುತ್ತಿಗೆ ನೀಡಿ ಎಂದು ಮುಖ್ಯಾಧಿಕಾರಿಗೆ ಮನವಿ ಮಾಡಿದರು.
ಪ.ಪಂ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಪ್ರತಿಯೊಬ್ಬರಿಗೆ ಜವಬ್ದಾರಿಗಳು ಇದ್ದಾವೆ, ಎಲ್ಲಾ ಅಧಿಕಾರಿಗಳಿಗೆ ನಿಮ್ಮ ಪರಿಚಯವಿದೆಯೇ? ಪ್ರತಿ ವಾರ್ಡ್ಗಳಲ್ಲಿ ಸದಸ್ಯರುಗಳು ಮೂಲಭೂತ ಸೌಲಭ್ಯಗಳು ಒದಗಿಸುತ್ತಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರು.
೭ನೇ ವಾರ್ಡ್ನ ಪೊಲೀಸ್ ಠಾಣೆ ಪಕ್ಕದ ರಸ್ತೆಯಿಂದ, ಬೈಪಾಸ್ ರಸ್ತೆಯವರೆಗೆ ಸಿಸಿ ರಸ್ತೆ ಮಾಡಿಸುವಂತೆ ಹೇಳಿದರು. ಪ.ಪಂ ಮುಖ್ಯಾಧಿಕಾರಿ ಓ.ಶ್ರೀನಿವಾಸ್ ಮಾತನಾಡಿ ಅನುದಾನದ ಬಂದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
೧೨ನೇ ವಾರ್ಡ್ನ ಪ.ಪಂ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ ಮಾತನಾಡಿ ೧೨ನೇ ವಾರ್ಡ್ನಲ್ಲಿ ಪೈಪ್‌ಲೈನ್ ವ್ಯವಸ್ಥೆ ಹದಗೆಟ್ಟಿದೆ, ಚರಂಡಿ ಹಾಗೂ ಸಿಸಿ ರಸ್ತೆ ಮಾಡಿಸುವಂತೆ, ಮುಖ್ಯ ರಸ್ತಯಿಂದ (ಮಯೂರ ಇಂಟರ್‌ನ್ಯಾಷನಲ್ ಶಾಲೆಯ ಮುಂಭಾಗ) ಒಳಮಠ ದೇವಸ್ಥಾನದವರೆಗೆ ಸಿಸಿ ರಸ್ತೆ ಮಾಡಿಸುವಂತೆ ಮನವಿ ಮಾಡಿದರು.
ಮಾಜಿ ಪ.ಪಂ ಸದಸ್ಯ ಬಸಪ್ಪ ನಾಯಕ ಮಾತನಾಡಿ ಸಣ್ಣಪುಟ್ಟ ಜನಾಂಗಕ್ಕೆ ರುದ್ರಭೂಮಿ ಇಲ್ಲದೆ ತಾಲ್ಲೂಕಿನ ರುದ್ರಭೂಮಿಗೆ ಹೋಗಿ ಅಂತ್ಯಸAಸ್ಕಾರ ಮಾಡಿರುವ ಉದಾರಣೆಗಳು ಇವೆ. ಆದ್ದರಿಂದ ಕೆಲವೊಂದು ಜನಾಂಗಕ್ಕೆ ಭೂಮಿ ಗುರುತಿಸಿ ರುದ್ರಭೂಮಿ ಕಲ್ಪಿಸಿ, ವಿದ್ಯುತ್ ಚಿತಾಗಾರ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ನೂತನ ಪ.ಪಂ ಸದಸ್ಯ ಎಂ.ಟಿ.ಮAಜುನಾಥ ಮಾತನಾಡಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ೪ ಹಳ್ಳಿಗಳು ಬರುತ್ತಿದ್ದು, ಕಾವಲು ಬಸವೇಶ್ವರ ನಗರ, ಜಾಗನೂರಹಟ್ಟಿ, ಚನ್ನಬಸಯ್ಯನಹಟ್ಟಿ, ಬೋಸೆದೇವರಹಟ್ಟಿ ಗ್ರಾಮಗಳಲ್ಲಿ ಮಿನಿ ಗ್ರಂಥಾಲಯ ತೆರೆಯುವುದಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಕೆಲವೊಂದು ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕ ದುರಸ್ಥಿಯಲ್ಲಿವೆ. ಅವುಗಳನ್ನು ದುರಸ್ಥಿ ಮಾಡಿಸಿ ಜನಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಧನಂಜಯ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಮನವಿ ಮಾಡಿದರು.
೧೫ನೇ ವಾರ್ಡ್ನ ಸದಸ್ಯ ಓಬಯ್ಯ ದಾಸ್ ಮಾತನಾಡಿ ಶಾಲಾ ಮಕ್ಕಳಿಗೆ ಕುಡಿಯುವ ನೀರು ಹಾಗೂ ಶೌಚಾಲಯ ಒದಗಿಸುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಪ.ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಅತಿ ಶೀಘ್ರದಲ್ಲೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸದಸ್ಯರಾದ ಕೆ.ಬಿ.ತಿಪ್ಪೇಸ್ವಾಮಿ, ಸುನಿತಾ ಮುದಿಯಪ್ಪ, ಪಾಪಮ್ಮ, ಬೋಸಮ್ಮ, ಮಹೇಶ್ವರಿ, ಗುರುಶಾಂತಮ್ಮ, ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು, ಮಾದ್ಯಮ ಮಿತ್ರರು, ಪಟ್ಟಣದ ಗ್ರಾಮಸ್ಥರು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಇನ್ನೂ ಮುಂತಾದವರು ಹಾಜರಿದ್ದರು.