ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದಲ್ಲಿ ನಡೆದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹಾಗೂ ದೊಡ್ಡಚೆಲೂರು ಗ್ರಾಮದಲ್ಲಿ ನಡೆದ ಸುಮಾರು 20.00ಕೋಟಿ ರೂ.ಗಳ ವೆಚ್ಚದಲ್ಲಿ ಚಳ್ಳಕೆರೆ ಯಿಂದ (ರಾಷ್ಟೀಯ ಹೆದ್ದಾರಿ 150A) , ವಿಶ್ವನಾಥನಹಳ್ಳಿ (ಎಸ್. ಹೆಚ್.48) ಚೈ. 76.90 ಕಿ.ಮೀ. ಯಿಂದ 89.90 ಕಿ.ಮೀ.ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ವಿಜಯ್ ಭಾಸ್ಕರ್, ಪರಶುರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗಳೂರುಸ್ವಾಮಿ, ದೊಡ್ಡಚೆಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಈರಣ್ಣ, ಸದಸ್ಯರುಗಳು, ಮುಖಂಡರುಗಳಾದ ಚನ್ನಕೇಶವ, ಸುರೇಶ್, ಬಸವರಾಜ್, ಪ್ರಸನ್ನಕುಮಾರ್, ನಾಗರಾಜ್, ರುದ್ರೇಶ್, ನಾಗಭೂಷಣ, ಕರಿಯಣ್ಣ, ಪ್ರಕಾಶ್, ರಮೇಶ್, ಬೊಮ್ಮಕ್ಕ, ಅನಿತಾ, ಮಂಜುಳಾ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.