ಚಳ್ಳಕೆರೆ ಮೇ.27 : ಸರ್ಕಾರದ ಆಶಯದಂತೆ ಸಮಸ್ಯೆಮುಕ್ತ ಗ್ರಾಮಗಳನ್ನಾಗಿ ಮಾಡಲಾಗುತ್ತಿದ್ದು ಗ್ರಾಮದ ಸವೋತೋಮುಖ ಅಭಿವೃದ್ದಿಗೆ ಅಧಿಕಾರಿಗಳು ಜವಾಬ್ದಾರಿಯುವತವಾಗಿ ಕೆಲಸ ಪೂರೈಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.

ಅವರು ತಾಲೂಕಿನ ಓಬಣ್ಣನಹಳ್ಳಿ ಗ್ರಾಮದಲ್ಲಿ ಸಮಸ್ಯೆಮುಕ್ತ ಗ್ರಾಮದ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಗೊರಕಿಸುವುದು ಸರಕಾರದ ಆಶಯ ಆದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸರಕಾರದಲ್ಲಿ ಪ್ರತಿನಿಧಿಸಿರುವ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಆಶಯದಂತೆ ಈಗಾಗಲೆ ತಾಲ್ಲೂಕಿನಲ್ಲಿ 32 ಸಮಸ್ಯೆಮುಕ್ತ ಗ್ರಾಮಗಳನ್ನಾಗಿ ಮಾಡಿಲಾಗಿದ್ದು ಉಳಿದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಗಳನ್ನು ಸಮಸ್ಯೆಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು, ಅದರಂತೆ ಪ್ರತಿ ಗ್ರಾಮದಲ್ಲಿ ಪೋಡಿ ಸಮಸ್ಯೆ, ಪಿಂಚಣಿ, ಖಾತೆಬದಲಾವಣೆ, ಸಂಧ್ಯಾಸುರಕ್ಷ, ವಿಧವಾವೇತನ, ವಿಕಲಚೇತನ ವೇತನ ಈಗೇ ಗ್ರಾಮದಲ್ಲಿ ಸ್ವಚ್ಛತೆ ಚರಂಡಿ ಹಾಗೂ ನಿವೇಶನ ಸೇರಿದಂತೆ ಮೂಲಸೌಕರ್ಯಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲಾಗುವುದು ಎಂದರು.

ಗ್ರಾಮಸ್ಥರ ಬೇಡಿಕೆಗಳು :

ಗ್ರಾಮಕ್ಕೆ ಆರೋಗ್ಯ ಸಹಾಯಕಿಯರು ಹಾಗೂ ಗ್ರಾಮದ ಅಭಿವೃದ್ದಿಗೆ ವಸತಿ ನಿವೇಶನಗಳು, ಸಾರಿಗೆ ವ್ಯವಸ್ಥೆ, ಗುಣ ಮಟ್ಟದ ಶಿಕ್ಷಣಕ್ಕೆ ಪೂರಕ ಸ್ಮಾಟ್ ಕ್ಲಾಸ್ ಗೆ, ಗ್ರಾಮದಲ್ಲಿ ಚರಂಡಿ, ರಸ್ತೆ ಈಗೇ ಹಲವು ಮನವಿಗಳು ಸಲ್ಲಿಸಿದರು.

ಜೋಡೆತ್ತು ಗಾಡಿಯಲ್ಲಿ ಡಿಸಿ ಮೆರಣಿಗೆ :

ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲು ಬಂದ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರಿಂದ ಜೋಡೆತ್ತು ಬಂಡಿಯಲ್ಲಿ ಅದ್ದೂರಿ ಸ್ವಾಗತ ಕೋರಿದರು, ಇನ್ನೂ ಕಲಾ ತಂಡಗಳ ಮೂಲಕ ಗ್ರಾಮದಲ್ಲಿ ಹಬ್ಬದ ವಾತವರಣ ಸೃಷ್ಠಿಯಾಗಿತ್ತು, ಕಂಬಳಿ ಧರಿಸಿ ಜೋಡೆತ್ತು ಬಂಡಿ ಹೊಡೆಯುವ ರೈತನ ಮೊಗದಲ್ಲಿ ಆನಂದ ಬಾಷ್ಪ ಜಿನುಗುತಿತ್ತು, ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಬೇಟಿಗೆ ಈಡೀ ಗ್ರಾಮದ ಜನರು ನೆರೆದಿದ್ದರು.

ಹೇಳಿಕೆ :

ಇಂದು ತಾಲೂಕಿನಲ್ಲಿ 32ನೇ ಸಮಸ್ಯೆಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಿದ್ದೆವೆ ಮುಂದಿನ ದಿನಗಲ್ಲಿ ಮೊಳಕಾಲ್ಮುರು ಹಾಗೂ ಚಳ್ಳಕೆರೆ ಎರಡು ಕ್ಷೇತ್ರಗಳ ಗ್ರಾಮಗಳ ಜನರು ಇನ್ನೂ ಆರು ತಿಂಗಳ ಕಾಲ ಸರಕಾರಿ ಕಛೇರಿಗೆ ಬಾರದಂತೆ ಅವರ ಸರಕಾರಿ ಕೆಲಸಗಳನ್ನು ಪೂರೈಸಿದೆ ಇದರಿಂದ ಗ್ರಾಮೀಣ ಪ್ರದೇಶಗಳಿಂದ ನಿತ್ಯ ಸರಕಾರಿ ಕಛೇರಿಗೆ ಅಲೆಯಬಾರದು ಎಂಬ ನಿಲುವಿನಲ್ಲಿ ಸರಕಾರದ ಆಶಯದ ಮೇರೆಗೆ ಕ್ಷೇತ್ರದ ಶಾಸಕ, ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಆಶಯದಂತೆ ಸಮಸ್ಯೆಮುಕ್ತ ಗ್ರಾಮ ಎಂಬ ಪರಿಕ್ಪನೆ ಮೂಲಕ ಗಾಂಧಿಕಂಡ ಕನಸು ಗ್ರಾಮ ಸ್ವರಾಜ್ಯ ಕನಸು ಈಡೇರಿಸಿದಂತಾಗುತ್ತದೆ.

– ತಹಶೀಲ್ದಾರ್ ಎನ್.ರಘುಮೂರ್ತಿ

Namma Challakere Local News
error: Content is protected !!