ಚಳ್ಳಕೆರೆ :
ಬಯಲಿ ಸೀಮೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು ಚಳ್ಳಕೆರೆ ತಾಲೂಕಿನ ಹಲವು ಹಳ್ಳಿಗಳಿಗೂ ಸಮೃದ್ದಿ ಮಳೆಯಾಗಿದ್ದು ಕೆರೆಕಟ್ಟೆ ಗೋಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಅದರಂತೆ ಕೆರೆ ಕೋಡಿ ಸಮೀಪದಲ್ಲಿರುವ ರೈತರ ಹೊಲಗಳಿಗೆ ನೀರು ನುಗ್ಗಿದ್ದು ರೈತ ಸಂಕಷ್ಟದಲ್ಲಿ ಸಿಲುಕಿದ್ದಾನೆ.
ಇನ್ನೂ
ಚಳ್ಳಕೆರೆ ತಾಲ್ಲೂಕು ವರವು ಗ್ರಾಮದ ಕೆರೆ ಕೋಡಿ ಬಿದ್ದಿದ್ದು ಗ್ರಾಮದ ಅನೇಕ ರೈತರ ಹೊಲಗಳಿಗೆ ನೀರು ನುಗ್ಗಿ ಟೊಮೊಟೊ ಹಾಗು ಇತರೆ ಬೆಳೆಗಳು ನಷ್ಟವಾಗಿವೆ.
ಇನ್ನೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯುಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹಾಗೂ ಹಲವು ರೈತರು ಮಳೆ ಹಾನಿಗೆ ತುತ್ತಾದ ರೈತನ ತೋಟಕ್ಕೆ ಬೇಟಿನೀಡಿ ರೈತನ ಸಂಕಷ್ಟಕ್ಕೆ ಸರಕಾರ ಪರಿಹಾರ ನೀಡಬೇಕು, ಅಧಿಕಾರಿಗಳು ಪರಿಹಾರಕ್ಕೆ ಶಿಪಾರಸ್ಸುಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಕೊಟ್ಟು ರೈತನಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಲಕ್ಷಾಂತರ ಹಣವನ್ನು ಬೆಳೆಗಾಗಿ ವ್ಯಯಿಸಿದ್ದು ಅವರ ಸಂಕಷ್ಟಕ್ಕೆ ದಾವಿಸಬೇಕು ಎಂದರು.
ಕೆರೆ ಕೊಡಿ ಸಮೀಪ ವೀರುವ ರೈತನ ಟಮೊಟೊ ತೋಟಕ್ಕೆ ನುಗ್ಗಿದ ನೀರಿಗೆ ಬೆಳೆ ಸಂಪೂರ್ಣವಾಗಿ ಹಾಲಾಗಿದ್ದು ರೈತ ನಷ್ಟಕ್ಕೆ ಸಿಲುಕಿದ್ದಾನೆ.