ಚಳ್ಳಕೆರೆ :
: ಕಾಲೇಜು(College) ಕಟ್ಟಡದ ಮೇಲಿನಿಂದ ಜಿಗಿದು
ವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ಚಿತ್ರದುರ್ಗ ನಗರದಲ್ಲಿ
ನಡೆದಿದೆ.
ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಪ್ರೇಮಾ ಮೃತ ವಿದ್ಯಾರ್ಥಿನಿ. ಬೆಳಗ್ಗೆ
ಕಾಲೇಜಿಗೆ ಬಂದಾಗ ಈ ಘಟನೆ ನಡೆದಿದೆ.
ನಗರದ ಚಿತ್ರಾ ಡಾನ್ ಬಾಸ್ಕೋ ಕಾಲೇಜಿನ ಮೂರನೇ ಮಹಡಿಯಿಂದ
ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪ್ರೇಮಾಳನ್ನು ತಕ್ಷಣ
ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ
ಮೃತಪಟ್ಟಿದ್ದಾರೆ.
ಮೆದೇಹಳ್ಳಿ ನಿವಾಸಿ ಸುಧಾಕರ್ ಎಂಬುವವರ ಮಗಳು ಪ್ರೇಮಾ ಮೃತ
ವಿದ್ಯಾರ್ಥಿನಿ. ನಿಖರ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ,
ಬಡಾವಣೆ ಠಾಣೆ ಪಿಎಸ್‌ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.