ಚಳ್ಳಕೆರೆ :
ಕೊನೆಗೂ ಬಾರ್ ಮುಚ್ಚಿಸಿದ ಗ್ರಾಮಸ್ಥರು
ಚಳ್ಳಕೆರೆಯ ಗೌರಸಮುದ್ರ ಗ್ರಾಮದಲ್ಲಿ ತಿರುಮಲ ಬಾರ್
ಮತ್ತು ರೆಸ್ಟೋರೆಂಟ್ ಮುಚ್ಚಿಸುವಂತೆ ಆಗ್ರಹಿಸಿ ಕಳೆದ ಐದು
ದಿನಗಳಿಂದ ನಡೆಸುತ್ತಿದ್ದ ಧರಣಿ ಕೊನೆಗೊಂಡಿದ್ದು,
ಬಾರನ್ನು
ಅಧಿಕಾರಿಗಳು ಮುಚ್ಚಿಸಿದ್ದಾರೆ. ಗ್ರಾಮಸ್ಥರು ವಿವಿಧ ರೀತಿಯ
ಪ್ರತಿಭಟನೆಗಳನ್ನು ನಡೆಸಿ ಗಮನ ಸೆಳೆದಿದ್ದರು.
ಅಹೋರಾತ್ರಿ,
ಭಜನೆ, ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಹೀಗೆ ವಿವಿಧ ಧರಣಿ
ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ
ಬಾರ್ ನ್ನು ಮುಚ್ಚಿಸಿದ್ದಾರೆ.