ರೇಖಲಗೆರೆ ಗ್ರಾಮದಲ್ಲಿ ಮಹಮ್ಮದ್ ಸುಭಾನಿ ಜಂಡಕಟ್ಟೆ ಹಬ್ಬ ಸಂಭ್ರಮ

ನಾಯಕನಹಟ್ಟಿ:: ಅ.15.
ರೇಖಲಗೆರೆ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮಹಮ್ಮದ್ ಸುಭಾನಿ ಜಂಡೆಕಟ್ಟಿ ಹಬ್ಬವು ಅದ್ದೂರಿಯಾಗಿ ಜರುಗಿತು.

ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಖಲಗೆರೆ ಗ್ರಾಮದ ದರ್ಗಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಪ್ರತಿ ವರ್ಷದಂತೆ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಮಹಮ್ಮದ್ ಸುಭಾನಿ ಜಂಡಕಟ್ಟೆ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಇನ್ನೂಅಕ್ಟೋಬರ್ 15 ರ ಮಂಗಳವಾರ ರಾಜ್ಯದ ನಾನಾ ಭಾಗಗಳಿಂದ ಮುಸ್ಲಿಂ ಬಾಂಧವರು ಆಗಮಿಸಿ ರೇಖಲಗೆರೆ ಗ್ರಾಮದ ದರ್ಗಾದಲ್ಲಿ ಸಕ್ಕರೆ ಹೂ ಮಾಲೆ ದೇವರಿಗೆ ಪ್ರಾರ್ಥನೆನಾ ಸಲ್ಲಿಸುತ್ತಾರೆ.

ಇನ್ನೂ ರಾಜ್ಯದ ನಾನ ಭಾಗಗಳಿಂದ ಬಂದಂತಹ ಮುಸ್ಲಿಂ ಬಾಂಧವರಿಗೆ ಗ್ರಾಮಸ್ಥರು ಅನ್ನ ಸಂತರ್ಪಣೆಯನ್ನು ನಡೆಸಿದರು.

ಇದೇ ಸಂದರ್ಭದಲ್ಲಿ ಮಹಮ್ಮದ್ ಸುಭಾನಿ ಜಂಡಕಟ್ಟೆ ಸಮಿತಿಯ ಅಧ್ಯಕ್ಷ ರೆಹಮತ್ ಉಲ್ಲಾ ಚಳ್ಳಕೆರೆ, ಗ್ರಾಮದ ಮುಖಂಡ ಎಂ. ಚಿನ್ನಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ.ಟಿ. ಅಶೋಕ್, ಪೂಜಾರಿ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಗ್ರಾಮ ಪಂಚಾಯತಿಯ ಹಾಲಿ ಸದಸ್ಯರಾದ ವೀರೇಶ್, ಬಸಮ್ಮ, ಮಲ್ಲೂರಹಳ್ಳಿ ಸಣ್ಣ ಪಾಲಯ್ಯ, ರೇಖಲಗೆರೆ ತಿಪ್ಪೇಸ್ವಾಮಿ, ಊರಿನ ಮುಖಂಡರು ಎಲ್ಲಾ ಗ್ರಾಮಸ್ಥರು ಹಿಂದೂ ಮತ್ತು ಮುಸ್ಲಿಂ ಭಕ್ತಾದಿಗಳು ಸಮಸ್ತ ರೇಖಲಗೆರೆ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!