ಚಳ್ಳಕೆರೆ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಕೊಲ್ಲಾಪುರದಮ್ಮದೇವಿ ಹಾಗೂ ಶ್ರೀ ಗೊಲ್ಲಾಳಮ್ಮ ದೇಬಿ ಅಂಬಿನೋತ್ಸವ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು.
ಚಳ್ಳಕೆರೆ ತಾಲೂಕಿನ ಲಕ್ಷ್ಮಿಪುರ ಗ್ರಾಮದ ಆದಿ ದೇವತೆಗಳಾದ ಶ್ರೀ ಕೊಲ್ಲಾಪುರದಮ್ಮ ದೇವಿ ಹಾಗೂ ಗೊಲ್ಲಾಳಮ್ಮ ದೇವಿ ಅಂಬಿನೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಸುಮಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವರುಗಳು ಈ ಗ್ರಾಮದಲ್ಲಿ ನೆಲೆಸಿರುವ ಐತಿಹಾಸವಿದೆ ಪ್ರತಿವರ್ಷದಂತೆ ವಿಜಯದಶಮಿ ಹಬ್ಬದಂದು ಮಾರಿಕಣಿವೆಯಲ್ಲಿ ಅಂಬಿನೋತ್ಸವ ಮುಗಿದ ನಂತರ ಲಕ್ಷ್ಮಿಪುರ ಗ್ರಾಮದಲ್ಲಿ ಈ ದೇವತೆಗಳ ಅಂಬಿನೋತ್ಸವ ನೆರವೇರಿಸುತ್ತಾ ಗ್ರಾಮದ ಭಕ್ತಾದಿಗಳು ಬಂದಿರುತ್ತಾರೆ.
ಈ ಬಾರಿಯೂ ಸಹ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ದೇವತೆಗಳ ಮೆರವಣಿಗೆ ಮಾಡುವ ಮೂಲಕ ಬನ್ನಿ ಮರಕ್ಕೆ ಹೋಗಿ ಶಾಸ್ತ್ರೋಕ್ತವಾಗಿ ಬಿಲ್ಲು ಬಾಣಗಳ ಜೊತೆಯಲ್ಲಿ ಪೂಜೆ ಮಾಡುತ್ತಾ ಅಂಬಿನೋತ್ಸವವನ್ನು ನೆರವೇರಿಸಿದರು.
ಇದೇ ಸಂಧರ್ಭದಲ್ಲಿ ಅರ್.ರಂಗಸ್ವಾಮಿ ಗ್ರಾಮದ ಹರಿಜನ ಕಾಲೋನಿಯ ಅಕ್ಕತಂಗಿಯರು ಮತ್ತು ಅಣ್ಣ ತಮ್ಮಂದಿರು ಹಾಗೂ ಗ್ರಾಮದ ಪ್ರಮುಖರಾದ ಸದಸ್ಯರು ಮತ್ತು ನಗರಂಗೆರೆಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ನಾಗವೇಣಿ ಕರಿಯಣ್ಣ, ಉಪಾಧ್ಯಕ್ಷ ಓಬಯ್ಯ ಹಾಗೂ ಹಟ್ಟಿ ಯಜಮಾನರಾದ ಗುರು ಶಾಂತಪ್ಪ, ಪೂಜಾರಿ ಕರಿಯಪ್ಪ, ದುರುಗಪ್ಪ ,ಪೇಪರ್ ರಂಗಸ್ವಾಮಿ, ಹಾಗೂ ನಿಂಗಮ್ಮ, ರೇಣುಕಮ್ಮ, ಕೊಲ್ಲಮ್ಮ, ಶಿವಮ್ಮ, ರೂಪಮ್ಮ, ಹಾಗೂ ಗ್ರಾಮದ ಹಿರಿಯ ಕಿರಿಯ ಸ್ಥಳೀಯರೆಲ್ಲರು ಸೇರಿ ಕೊಂಡು ಸಾಕಷ್ಟು ಮೆರವಣಿಗೆದೊಂದಿಗೆ ದಸರಾ ಹಬ್ಬದ ಹೊಂಬಿನೋತ್ಸವವನ್ನು ಆಚರಿಸಿದರು.