ಚಿತ್ರದುರ್ಗ : ನಗರದ ಎಸ್. ಜೆ. ಎಂ.ತಾಂತ್ರಿಕ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಚೆನ್ನೈ ಎಕ್ಸಿಕ್ಯೂಟ್ ಸ್ಮಾರ್ಟ ಟೆಕ್ನಾಲಾಜಿಸ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪ್ರೊ. ಸುಧಾಕರನ್ ಸುರಳಿರಾಜ್‌ರವರು ಸಂಪನ್ಮೂಲ ವ್ಯಕ್ತಿಯಾಗಿ “ರ‍್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ರ‍್ನಿಂಗ್ ಬಳಸಿ ಡೇಟಾ ಅನಾಲಿಟಿಕ್ಸ್” ಎಂಬ ವಿಷಯದ ಕಾರ್ಯಗಾರ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಭರತ್ ಪಿ.ಬಿ ವಹಿಸಿ, ವಿದ್ಯಾರ್ಥಿಗಳಿಗೆ ಕಾರ್ಯಗಾರ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಕಾರ್ಯಗಾರದಲ್ಲಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಪೊರಾಳ್ ನಾಗರಾಜ ವಿದ್ಯಾರ್ಥಿಗಳಿಗೆ ಕಾರ್ಯಗಾರ ವಿಷಯವು ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಪ್ರಸತ್ತು ಗಣಕ ಯಂತ್ರ ವಿದ್ಯಾಮಾನದಲ್ಲಿ ಉತ್ತಮ ನೌಕರಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಗಾರದ ಸಂಚಾಲಕರಾದ ಪ್ರೊ. ಬಸಂತ ಕುಮಾರಿ ಮತ್ತು ಪ್ರೊ.ಶೃತಿ. ಎಂ.ಕೆ. ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶ್ವಿಸಿಗೆ ಸಾಕ್ಷಿಯಾದರು.