ಅಬ್ಬೇನಹಳ್ಳಿ ಗ್ರಾ.ಪಂ.ಯಲ್ಲಿ ಗ್ರಾಮ ಆರೋಗ್ಯ ತರಬೇತಿ ಹಾಗೂ ತಂಬಾಕು ಮುಕ್ತ ಯುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪಾಪಮ್ಮ ಆನಂದಪ್ಪ.
ನಾಯಕನಹಟ್ಟಿ::ಅ.16. ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಪಾಪಮ್ಮ ಆನಂದಪ್ಪ ಹೇಳಿದ್ದಾರೆ.
ಬುಧವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗ್ರಾಮ ಆರೋಗ್ಯ ತರಬೇತಿ ಹಾಗೂ ತಂಬಾಕು ಮುಕ್ತ ಯುವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರ ಗ್ರಾಮೀಣ ಪ್ರದೇಶದ ಬಡ ಜನರಿಗೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯವಂತರಾಗಿ. ಉತ್ತಮ ಆರೋಗ್ಯ ಸೇವೆ ಪಡೆದುಕೊಳ್ಳಿ ಎಂದರು.
ತಾಲೂಕು ಆರೋಗ್ಯ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್, ಬಿ, ತಿಪ್ಪೇಸ್ವಾಮಿ ಮಾತನಾಡಿದರು ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಕ್ರಮಿಕ ರೋಗಗಳ ಭಾದೆ ಮತ್ತು ಅಸಂಕ್ರಾಮಿಕ ರೋಗಗಳು ಹೆಚ್ಚಾಗಿವೆ ನಿಖರವಾದ ಚಿಕಿತ್ಸೆ ನೀಡಿದರೆ ನಿಯಂತ್ರಿಸಬಹುದು ಡೆಂಗ್ಯೂ ಮಲೇರಿಯಾ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ ಪೌಷ್ಟಿಕತೆ ಮತ್ತು ಅಪೌಷ್ಟಿಕತೆ ರಕ್ತ ಹೀನತೆ ಎಚ್ ಬಿ ಮುಖಾಂತರ ಗುರುತಿಸ ಬಹುದು ರಕ್ತ ಉತ್ಪತ್ತಿಗೆ ಗರ್ಭಿಣಿಯರು ಮೊಳಕೆ ಕಾಳು ಸೊಪ್ಪು ತರಕಾರಿ ಮೊಟ್ಟೆ ಶೇಂಗಾ ಬೆಲ್ಲ ಬಳಸುವುದರಿಂದ ರಕ್ತದ ಉತ್ಪತ್ತಿ ಹೆಚ್ಚಾಗುತ್ತದೆ ಎಂದರು.
ಇನ್ನೂ ಅಂಗನವಾಡಿ ಮೇಲ್ವಿಚಾರಕಿ ಎಚ್. ಸುನಿತಾ ಮಾತನಾಡಿದರು ಬಾಲ್ಯ ವಿವಾಹ ಎಂಬ ಸಾಮಾಜಿಕ ಪಿಡುಗು ತೊಲಗಿಸಲು ಗ್ರಾಮದ ಪ್ರತಿಯೊಬ್ಬರು ಕೈಜೋಡಿಸಿ ಬಾಲ್ಯ ವಿವಾಹ ಎಂಬ ಪಿಡುಗು ಬಹುಕಾಲದಿಂದಲೂ ಭಾರತ ಸೇರಿದಂತೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಅಸ್ವಸ್ಥದಲ್ಲಿದೆ ನಾನಾ ಕಾರಣಗಳಿಂದ ಬಾಲ್ಯ ವಿವಾಹ ಪದ್ಧತಿ ಬೆಳೆದು ಬಂದಿದೆ ಬಡತನ ಹಾಗೂ ಅನಾಕ್ಷರತೆ ಬಾಲ್ಯ ವಿವಾಹಕ್ಕೆ ಕಾರಣವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಗ್ರಾಮೀಣ ಪ್ರದೇಶದ ಜನರಿಗೆ ಬಾಲ್ಯ ವಿವಾಹ ತಡೆಯಲು ಮುಂದಾಗಬೇಕು ಎಂದರು.
ತಾಲೂಕು ಆರೋಗ್ಯ ಇಲಾಖೆಯ ಮೇಲ್ವಿಚಾರಕ ಸಿ.ಆರ್. ರಾಘವೇಂದ್ರ ಮಾತನಾಡಿ ಟಿವಿ ಮತ್ತು ಕ್ಷಯ ರೋಗದ ಬಗ್ಗೆ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ ಜಯಣ್ಣ, ಸದಸ್ಯರಾದ ಗಾದ್ರಪ್ಪ, ಪಡ್ಲ ಬೋರಯ್ಯ, ಶೇಖರಗೌಡ, ಬಿ ಸಣ್ಣ ಪಾಲಯ್ಯ, ಹಾಗೂ ಗ್ರಾಮದ ಯುವ ಮುಖಂಡ ಎ.ಪಿ. ರೇವಣ್ಣ, ಪಿಡಿಒ ಮೋಹನ್ ದಾಸ್, ಗುಂತಕೋಲಮ್ಮನಹಳ್ಳಿ ಮುಖ್ಯ ಶಿಕ್ಷಕ ಜಿ.ವಿ.ಬಂಗಾರಪ್ಪ, ತೊರೆಕೋಲಮ್ಮನಹಳ್ಳಿ ಮುಖ್ಯ ಶಿಕ್ಷಕ ಎಂ ಮಲ್ಲಿಕಾರ್ಜುನ್, ಕೊರಡಿಹಳ್ಳಿ ಹೊಸೂರು ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎನ್ ಮಹಾಂತೇಶ್, ಆರ್ ಗಿರೀಶ್ ಜೆ ಕೃಷ್ಣಪ್ಪ ಮುಖ್ಯ ಶಿಕ್ಷಕರು ಮುಸ್ಟಲಗುಮ್ಮಿ, ಮುಸ್ಟಲಗುಮ್ಮಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಎನ್ ಜಿ ಚೇತನ, ಸಮುದಾಯ ಅಧಿಕಾರಿ ಪಿ.ಆರ್. ನಯನಕುಮಾರಿ, ಆಶಾ ಕಾರ್ಯಕರ್ತೆರಾದ ಎ ಬಿ ನಾಗವೇಣಿ ,ಎಂ ಆರ್ ರತ್ನಮ್ಮ, ಎಂ.ಬಿ. ಮಂಜುಳಾ, ಅಂಗನವಾಡಿ ಶಿಕ್ಷಕಿರಾದ ಲಕ್ಷ್ಮೀದೇವಿ, ಲಕ್ಷ್ಮಿ, ಎಸ್ ಗೀತಮ್ಮ, ಟಿ ಮಂಜುಳಾ, ಎಚ್ ರತ್ನಮ್ಮ,ಬಿ ಸಣ್ಣೋಬಮ್ಮ, ಮಹಾಲಕ್ಷ್ಮಿ , ಎಸ್ ಪಾಲಮ್ಮ, ಕೆ.ಓ.ಶ್ರೀದೇವಿ, ಆರ್ ಶಿವಕುಮಾರಿ, ಬಿ ಉಮಾದೇವಿ, ಎಸ್ ಪಿ ರೋಜಾ ,ಎಂ ಬಿ ಪಾರ್ವತಮ್ಮ,