ಚಳ್ಳಕೆರೆ :
ಮಳೆ ಬಂದರೆ ಸಾಕು ಇಲ್ಲಿನ ಮನೆಗಳಿಗೆ ನೀರುನುಗ್ಗಿ ಅಹೋ ರಾತ್ರಿ ನೀರಿನಲ್ಲಿ ಇರುವಂತ ಪರಸ್ಥಿತಿ ನಿರ್ಮಾಣವಾಗಿದೆ.
ಹೌದು ಚಳ್ಳಕೆರೆ ನಗರದ ಹೃದಯ ಭಾಗವಾದ ಎಸ್ ಆರ್ ರಸ್ತೆಯಲ್ಲಿ ಸುಮಾರು ಮೂರು ಅಡಿತನಕ ಮಳೆ ನೀರುನಿಂತು ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ.
ಇನ್ನೂ ಚರಂಡಿಗಳು ಸ್ವಚ್ಚತೆಯಿಲ್ಲದೆ ಅಕ್ಕ ಪಕ್ಕದ ಮನೆಯವರು ಅಕ್ರಮ ವಾಗಿ ಚರಂಡಿಯನ್ನು ಬಂದ್ ಮಾಡಿರುವುದರಿಂದ ಮಳೆ ಬಂದರೆ ಸಾಕು ನೀರು ಮುಂದಕ್ಕೆ ಹೋಗದೆ ನಿಂತಲ್ಲೆ ನಿಂತು ರಸ್ತೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿಯುಂಟು ಮಾಡುತ್ತಿದೆ.
ತಗ್ಗು ಪ್ರದೇಶವಾದ ಈ ಸ್ಥಳಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಿಂದ ನಗರದ ಕೆಲವು ವಾರ್ಡ್ ಗಳ ಮಳೆ ನೀರು ಚರಂಡಿ ಬಿಟ್ಟು ರಸ್ತೆ ಮಳೆ ಹರಿಯುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ತಗ್ಗು ಗುಂಡಿಗಳ ಬಿದ್ದು, ಮಳೆ ಬಂದ ಸಂಧರ್ಭದಲ್ಲಿ ಓಡಾಡುವ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಾಗುವಂತಿದೆ.
ಇನ್ನೂ ಸ್ಥಳೀಯ ಸಾರ್ವಜನಿಕರು ನಗರಸಭೆ ಕಛೇರಿಗೆ ಹಲವು ಬಾರಿ ಅಲೆದಾಡಿ ಚರಂಡಿ ಹಾಗೂ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದರು ಕ್ಯಾರೆ ಮಾಡದ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.
ನಗರದಲ್ಲಿ ಹಾನಿಯಾಗುವ ಪ್ರದೇಶಗಳು :
ಬಯಲು ಸೀಮೆಯಲ್ಲಿ ಕಾಲ ತಪ್ಪಿ ಬರುವ ಮಳೆಗೆ ನಗರದಲ್ಲಿ ರಹಿಂ ನಗರ, ಅಂಬೇಡ್ಕರ್ ನಗರ, ಸೂಜಿ ಮಲ್ಲೇಶ್ವರನಗರ, ಕಾಟಪನಹಟ್ಟಿ, ಹಳೆಟೌನ್, ಜನತಾ ಕಾಲೋನಿ, ವೆಂಕಟೇಶ್ವರ ನಗರ, ಅಭಿಷೇಕ್ ನಗರಗಳಲ್ಲಿ ಮಳೆ ಬಂದರೆ ನೀರುನುಗ್ಗಿ ಹಾನಿಯಾಗುತ್ತವೆ, ಇನ್ನೂ ಪ್ರತಿಭಾರಿಯೂ ಮಳೆ ಬಂದಾಗ
ನೂರಕ್ಕೂ ಹೆಚ್ಚು ಮನೆಗಳು ಹಾನಿಗೆ ಸಿಲುಕುತ್ತಾವೆ,
ಇನ್ನಾದರೂ ನಗರಸಭೆ ಅಧಿಕಾರಿಗಳು ದುರಸ್ತಿಯಾದ ಚರಂಡಿ ಹಾಗೂ ರಸ್ತೆಗೆ ಮುಕ್ತಿ ನೀಡಿ ಸಾರ್ವಜನಿಕರಿಗೆ ಅನುಕೂಲಕರ ಮಾಡಿಕೊಡುವರಾ ಕಾದು ನೋಡಬೇಕಿದೆ.