ಚಳ್ಳಕೆರೆ :

ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ತಿರುಮಲ ಬಾರ್ ಅಂಡ್ ರೆಸ್ಟರೆಂಟ್ ನ್ನೂ ಸ್ಥಳಾಂತರ ಮಾಡಲು ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ ಪ್ರತಿಭಟನಾಕಾರರು ರಾತ್ರಿ ವೇಳೆ ಭಜನೆ ಮಾಡುವ ಮೂಲಕ ಪ್ರತಿಭಟಿಸಿದರು.

ಗೌರಸಮುದ್ರ ಗ್ರಾಮದ ತಿರುಮಲ ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ ಅಹೋ ರಾತ್ರಿ ಧರಣಿ‌ಕುಳಿತ ಪ್ರತಿಭಟನಾಕಾರರ ಬಳಿ ತಹಶಿಲ್ದಾರ್ ರೇಹಾನ್ ಪಾಷ ಬೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರು ಆದರೆ ಕಿವಿಗೊಡದ ಪ್ರತಿಭಟನ ನಿರತರು ಅ.16 ರಂದು ಅಬಕಾರಿ ಜಿಲ್ಲಾ ತಂಡದೊಂದಿಗೆ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ‌ ನೀಡಿ ಮರಳಿದ್ದಾರೆ.

ಇನ್ನೂ ಪ್ರತಿಭಟನೆ ನಿರತ ಗ್ರಾಮ ಪಂಚಾಯತಿ ‌ಅಧ್ಯಕ್ಷ ಓಬಣ್ಣ,
ಸದಸ್ಯ ಶಶಿಕುಮಾರ್ ಮಾತನಾಡಿ, ತಿರುಮಲ ಬಾರ್ ಅಂಡ್ ರೆಸ್ಟೋರೆಂಟ್
ಗ್ರಾಮದ ಮಧ್ಯಭಾಗದಲ್ಲಿದ್ದು ಇದರಿಂದ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಹಾಗೂ ದೇವಿ ದರ್ಶನಕ್ಕೆ ಬರುವ ಮಹಿಳೆಯರಿಗೆ, ಭಕ್ತರಿಗೆ ತುಂಬಾ ಕಿರಿಕಿರಿಯಾಗುತ್ತದೆ, ಕುಡಿತದ ಅಮಲಿನಲ್ಲಿರುವ ಕೆಲವರು ಕೆಟ್ಟ ಶಬ್ದಗಳಿಂದ ನಿಂದಿಸುತ್ತಾ‌ ದಾರಿಯಲ್ಲಿ ಬಿಳುತ್ತಿದ್ದಾರೆ‌.

ಅದೇ ರೀತಿಯಾಗಿ ಅಕ್ಕಪಕ್ಕದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮತ್ತು ಗೌರಸಮುದ್ರ ಮಾರಮ್ಮ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿಯೇ ಮತ್ತು ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದ್ದು ಇದರಿಂದ ತುಂಬಾ ತೊಂದರೆಯಾಗುತ್ತದೆ‌ ಎಂದು ಕಿಡಿಕಾರಿದ್ದಾರೆ.

ಈ ಒಂದು ಸ್ಥಳದಲ್ಲಿ ಬಾರನ್ನು ಕಾನೂನುಬಾಹಿರವಾಗಿ ನಡೆಸುತ್ತಿರುವುದರಿಂದ ಇದನ್ನು ಕೂಡಲೇ ಬೇರೊಂದು ಸ್ಥಳಕ್ಕೆ ಸ್ಥಳಾಂತರ ಮಾಡುವರೆಗೆ ಅಹೋರಾತ್ರಿ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ಧರಣಿ‌ನಿರತರ ಮಾತಾಗಿದೆ.

About The Author

Namma Challakere Local News
error: Content is protected !!