ಜೆಡಿಎಸ್ ಪಕ್ಷದ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ
ನಾಯಕನಹಟ್ಟಿ:: ಹೋಬಳಿಯಲ್ಲಿ ಜೆಡಿಎಸ್ ಪಕ್ಷ ಸಂಘಟಿಸುವ ಕಾರ್ಯಕ್ಕೆ ಎಲ್ಲಾ ಕಾರ್ಯಕರ್ತರು ಕೈಜೋಡಿಸಬೇಕು ಜೆಡಿಎಸ್ ಪಕ್ಷದ ಏಳಿಗೆಗೆ ನಾವೆಲ್ಲರೂ ಸೇರಿ ಕಾರ್ಯೋನ್ನಖರಾಗೋಣ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ ಹೇಳಿದ್ದಾರೆ.
ಸೋಮವಾರ ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಜೆಡಿಎಸ್ ಪಕ್ಷದಿಂದ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷ ಈ ಹಿಂದೆ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದೆ ಆದರಿಂದ ಮುಂಬರುವ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನ ಸಂಘಟನೆ ಮಾಡುವುದು ಮುಖ್ಯವಾಗಿದೆ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ, ಹಾಗೂ ತಾಲೂಕು ಒಬಿಸಿ ಅಧ್ಯಕ್ಷ ಅಬ್ಬೇನಹಳ್ಳಿ ಚನ್ನಬಸಪ್ಪ ಇವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಹೋಬಳಿ ಅಧ್ಯಕ್ಷರಾಗಿ ಮಲ್ಲೂರಹಳ್ಳಿ ಸೆಳ್ಳೆ ಗೌಡ. ಉಪಾಧ್ಯಕ್ಷರಾಗಿ ನೇರಲಗುಂಟೆ ಅಂಜಿನಪ್ಪ ,ಕಾರ್ಯಧ್ಯಕ್ಷರಾಗಿ ಸೋಮು. ಎಸ್ ಟಿ ಗೌರವಾಧ್ಯಕ್ಷರಾಗಿ ದಾನವರ ಚಂದ್ರಣ್ಣ. ಎಸ್ ಟಿ ಅಧ್ಯಕ್ಷರಾಗಿ ತಾಲೂಕ ಅಧ್ಯಕ್ಷರಾಗಿ ಭೀಮನಕೆರೆ ಕಾರ್ತಿಕನಹಟ್ಟಿ ,ಬಸವರಾಜ್. ಎಸ್ ಸಿ ತಾಲೂಕು ಅಧ್ಯಕ್ಷರಾಗಿ ಮಲೇಬೋರನಹಟ್ಟಿ ಎಂ. ಆರ್ ಮಹಾಂತೇಶ್, ಎಸ್ ಟಿ ಘಟಕದ ಅಧ್ಯಕ್ಷರಾಗಿ ಮಾದಯ್ಯನಹಟ್ಟಿ ಪೂಜಾರಿ ತಿಪ್ಪೇಸ್ವಾಮಿ, ನಗರ ಘಟಕ ಅಧ್ಯಕ್ಷರಾಗಿ ಚನ್ನಬಸಯ್ಯನಹಟ್ಟಿ ಮಂಜುನಾಥ್, ಹೋಬಳಿ ಎಸ್ ಟಿ ಕಾರ್ಯ ಅಧ್ಯಕ್ಷರಾಗಿ ಡಿ ಎಂ ಮಹಾಂತೇಶ್ ಓಬಯ್ಯನಹಟ್ಟಿ.,ಹೋಬಳಿ ಕಾರ್ಯದರ್ಶಿಯಾಗಿ ಚಿನ್ಮ ಮಲ್ಲಯ್ಯ ಗೌಡ ಬಲ್ಲನಾಯಕನಹಟ್ಟಿ, ಹೋಬಳಿ ಎಸ್ ಟಿ ಉಪಾಧ್ಯಕ್ಷರಾಗಿ ಗುಂತಕೋಲಮ್ಮನಹಳ್ಳಿ ಕುರಿಹಟ್ಟಿ ತಿಪ್ಪೇಸ್ವಾಮಿ,. ಹೋಬಳಿ ಓಬಿಸಿ ಅಧ್ಯಕ್ಷ ರಾಗಿ ಸ್ವಾಮಿ ಎಸ್. ಹೋಬಳಿ ರೈತ ಘಟಕ ಅಧ್ಯಕ್ಷರಾಗಿ ಬೋಸೆ ದೇವರಹಟ್ಟಿ ಕೆ ಬಿ ಬೋರಯ್ಯ, ಇವರನ್ನು ತಾಲೂಕ ಅಧ್ಯಕ್ಷರ ಸಮ್ಮುಖದಲ್ಲಿ ಹೋಬಳಿ ಮಟ್ಟದ ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದರು.