ಗೌರಸಮುದ್ರ ಗ್ರಾಮದ ಮದ್ಯದ ಅಂಗಡಿ ತೆರವಿಗೆ ಆಗ್ರಹ
ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಹೌದು
ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಮಾರಮ್ಮ ದೇವಿಯ ಪುಣ್ಯ ಸ್ಥಳದ ಎಸ್ಟಿ-ಎಸ್ಟಿ ಕಾಲೋನಿ.ಶಾಲೆ ಹಾಗೂ ದೇವಸ್ಥಾನ ಸಮೀಪವಿದ್ದು.
ಜನವಸತಿ ವಸತಿ ಪ್ರದೇಶದಲ್ಲಿ ಮದ್ಯದ ಅಂಗಡಿ ಇರುವುದರಿಂದ ಕುಡುಕರ ಹಾವಳಿ ಹೆಚ್ಚಾಗಿದ್ದು ಅಕ್ಕಪಕ್ಕದ ಮನೆಗಳ ಮುದೆ ಮೂತ್ರ ವಿಸರ್ಜನೆ ಮಾಡುವುದು. ದೇವಸ್ಥಾನಕ್ಕೆ ಹೋಗಿ ಬರುವ ಮಹಿಳೆಯರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಕುಡುಕರ ಉದ್ದಟತನದಿಂದ ಸಾಮಾನ್ಯ ಜನರು ಪರಿತಪಿಸುವಂತಾಗಿದೆ
ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಪಂ ಅಧ್ಯಕ್ಚ ಓಬಣ್ಣ.ಸದಸ್ಯ ಶಶಿಧರ್ ಮಾತನಾಡಿ ಶಾಲೆಗಳು ಇರುವ ಜಾಗದಲ್ಲಿ ವೈನ್‌ಶಾಪ್ ಅವಕಾಶ ಇಲ್ಲ . ಆದರೆ, ಇಲ್ಲಿರುವ ಮದ್ಯದಂಗಡಿ ಗ್ರಾಮದ ಮಧ್ಯ ಭಾಗದಲ್ಲಿದ್ದು , ಇದರ ಪಕ್ಕದಲ್ಲಿ ದೇವಾಲಯ, ಶಾಲೆಗಳಿವೆ.ಗ್ರಾಮದಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ಜತೆಗೆಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಈಗಲಾದರೂ ಜಿಲ್ಲಾಡಳಿತ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ಮದ್ಯದ ಅಂಗಡಿ ತೆರವು ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ಸದಸ್ಯ ಆಗ್ರಹಿಸಿದಾರೆ.