ಚಳ್ಳಕೆರೆ :

ಚಳ್ಳಕೆರೆ ನಗರದ
ಎಸ್.ಆರ್. ರಸ್ತೆ ಮಾರ್ಗದ ವೆಂಕಟಪ್ಪ ಕಾಂಪ್ಲೆಕ್ಸ್ ಸಮೀಪದ ರಸ್ತೆಗೆ ‌ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಿ ಆದೇಶಿಸಬೇಕು ಎಂದು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘದಿಂದ ಇಂದು ನಗರಸಭೆಗೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಇನ್ನೂ ದೇಶದ ಕೀರ್ತಿ ಗೆ ಸಂಗೊಳ್ಳಿ ರಾಯಣ್ಣನ ಪರಿಶ್ರಮ ತುಂಬಾ ಇದೆ ಅಂತಹ ಪ್ರತಿಮ ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ ನ ಹೆಸರು ನಾಮಕರಣ ಮಾಡುವುದು ಈ ಭಾಗದ ನೆಲಕ್ಕೆ ಹೆಮ್ಮೆ ತರುವಂತಹದು ಎಂದು ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ಚಂದ್ರಣ್ಣ ಹೇಳಿದರು.

ಅವರು ನಗರದ ನಗರಸಭೆ ಕಾರ್ಯಲಾಯದಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ
ನಗರಸಭೆ ಆಡಳಿತ ಅಧಿಕಾರಿ ಲಿಂಗರಾಜು ಗೆ ಮನವಿ ಸಲ್ಲಿಸಿದರು.

ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿನ
ಎಸ್.ಆರ್. ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣಯುವಕರ ಸಂಘವು ಸಾರ್ವಜನಿಕರು
ಸಂಗೊಳ್ಳಿ ರಾಯಣ್ಣರಸ್ತೆ ಎಂದು ನಾಮಕರಣ ಮಾಡಿದ
ಸಮಯದಿಂದಲೂ
ತೊಡಗಿಸಿಕೊಂಡಿದ್ದು
ಸಮಾಜ ಮುಖಿಕಾರ್ಯಗಳಲ್ಲಿ
ಎಲ್ಲಾ ಕಾರ್ಯಕ್ರಮಗಳನ್ನು
ನಿಯಮ
ಬದ್ಧವಾಗಿ ಮತ್ತು ಸೌಹಾರ್ಧಯುತವಾಗಿ ನಿರ್ವಹಿಸಿಕೊಂಡು ಬಂದಿದೆ
ನಮ್ಮ ಯುವಕರ ಸಂಘದ ಬಹುದಿನದ ಬೇಡಿಕೆ ಎಸ್.ಆರ್. ರಸ್ತೆ ಮಾರ್ಗದಲ್ಲಿ
ಸಂಗೊಳ್ಳಿ ರಾಯಣ್ಣ ವೃತ್ತ ನಾಮಕರಣ ಮಾಡಬೇಕು ಈ
ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಾರ್ಡಿನ ಜನಪ್ರತಿನಿಧಿಗಳ
ಸಮ್ಮತಿ ಇದ್ದು ತಾವುಗಳು ನಮ್ಮ ಮನವಿಯನ್ನು ಪುರಸ್ಕರಿಸಿ
ಕಾನೂನಿನ ರೀತಿ ವೃತ್ತ ನಿರ್ಮಿಸಬೇಕೆಂದು ಮನವಿ ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ರಾಜೇಶ್, ಸಂಘನಾ ಕಾರ್ಯದರ್ಶಿ ‌ಮಾರುತಿ, ಪ್ರಶಾಂತ್, ಪ್ರವೀಣ್, ಯೋಗೇಶ್, ಭರತ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!