ಚಳ್ಳಕೆರೆ :
ಕಳೆದ ನಾಲ್ಕು ವರ್ಷಗಳಿಂದ ದಾರಿ ಸಮಸ್ಯೆ ಹೊತ್ತು ತಾಲೂಕು ಕಛೇರಿಗೆ ಅಲೆಯುವ ಗ್ರಾಮಸ್ಥರು ಗೋಳು ಕೇಳುವವರಿಲ್ಲವಾಗಿದೆ.
ಹೌದು ನಿಜಕ್ಕೂ ಶೋಚನೀಯ ಸುಮಾರು ಮುವತ್ತರಿಂದ ನಲವತ್ತು ಕಿಲೋ ಮೀಟರ್ ದೂರದ ಹಾಲಗೊಂಡನಹಳ್ಳಿ ಗ್ರಾಮದ ರೈತರು ದಿನ ನಿತ್ಯ ಕೂಲಿಬಿಟ್ಟು ತಮ್ಮ ಹೊಲಗಳಿಗೆ ಹೋಗುವ ದಾರಿ ಸಮಸ್ಯೆ ಹೊತ್ತು ತಾಲೂಕು ಕಛೇರಿಗೆ ಅಲೆಯುವ ಪರಿ ನೋಡುಗರಿಗೆ ನೋವುತರಿಸುವಂತಿದೆ.
ಕಳೆದ ನಾಲ್ಕು ವರ್ಷಗಳಿಂದ ಅರ್ಜಿ ಹಿಡಿದು ತಾಲೂಕು ಕಛೇರಿಗೆ ಅಲೆಯುವ ಕುಟುಂಬಗಳು ಹಸಿವಿನಿಂದ ದಿನವೀಡೀ ತಾಲೂಕು ಕಚೇರಿಯ ಪಟಸಾಲೆಯಲ್ಲಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಈ ಮೂಖ ವೇಧನೆಗೆ ಹಲವು ಬಾರಿ ತಾಲೂಕು ಆಡಳಿತ ತಹಶಿಲ್ದಾರ್ ನೇತೃತ್ವದಲ್ಲಿ ದಾರಿ ಸಮಸ್ಯೆ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಶಾಶ್ವತವಾಗಿ ಮುಕ್ತಿ ಕಾಣಿಸಲ್ಲವಾಗಿದೆ.
ಆದರೆ ಅಧಿಕಾರಿಗಳು ಜಾಣ ಕುರುಡುತನ ಎದ್ದು ಕಾಣುತ್ತದೆ, ಕೇವಲ ತಾತ್ಕಾಲಿಕವಾಗಿ ರಸ್ತೆಬಿಡಿಸಿ ಬಂದಿತ್ತಾದರೂ ಶಾಶ್ವತವಾಗಿ ಈ ಹಳ್ಳಿ ರೈತರಿಗೆ ದಾರಿ ಸಮಸ್ಯೆ ಯಿಂದ ಮುಕ್ತಿ ಕಾಣಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ.
ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿ,
ಹಾಲಿಗೊಂಡನಹಳ್ಳಿ ಗ್ರಾಮದ ಊರಿನಿಂದ
ಕಂಚಿಗೆ ಹೋಗುವ ಬಂಡಿ ದಾರಿಯಿಂದ ,
ರೈತರ ತಮ್ಮ ಕಾರ್ಯಗಳಿಗೆ ಹೋಗಲು ರೂಢಿಗತ ರಸ್ತೆಯಿದ್ದು ಸದರಿ ದಾರಿಯಲ್ಲಿ ಪತಿ ನಿತ್ಯ ಸುಮಾರು 60-70 ರೈತರು
ಈ ರಸ್ತೆಯಲ್ಲಿ ಓಡಾಡುತ್ತಾರೆ.
ಆದರೆ ಈಗ ಶೇಂಗಾ ಕೀಳುವ ಸಮಯ ಇಂತಹ ಸಮಯದಲ್ಲಿ ದಾರಿಯನ್ನು ಕೆಲವರು ಬಂದ್ ಮಾಡಿರುವ ಕಾರಣ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನು ಮನೆಗೆ ಕೊಂಡುಯ್ಯುಲು ಹಾಗದೆ ನಷ್ಟದಲ್ಲಿ ಇದ್ದೆವೆ ಆದ್ದರಿಂದ ದಯಮಾಡಿ ನಮ್ಮ ಹೊಲಗಳಿಗೆ ಹೋಗಲು ದಾರಿಯನ್ನು ಬಿಡಿಸಿಕೊಡಿ ಎಂದು ಮಹಿಳೆಯರು ವಯೋ ವೃದ್ದರು ಮನವಿಯನ್ನು ಹಿಡಿದು ತಾಲೂಕು ಕಛೇರಿಗೆ ಅಲೆಯುವ ದೃಶ್ಯ ಕಾಣಬಹುದು.
ಇನ್ನಾದರೂ ಹಳ್ಳಿ ರೈತರಿಗೆ ತಾಲೂಕು ಆಡಳಿತದಿಂದ ಮುಕ್ತಿ ಸಿಗುವುದೊ ಕಾದು ನೋಡಬೇಕಿದೆ.