ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ಪೂರ್ತಿ ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ. ಉಮೇಶ್ ಕುದಾಪುರ
ನಾಯಕನಹಟ್ಟಿ:: ಭಾರತದ ಮೂಲ ನಿವಾಸಿಗಳು ನಾವು ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದಂತೆ ಈ ದೇಶವನ್ನು ಆಳುವ ಶಕ್ತಿ ನಮಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ. ಉಮೇಶ್ ಕುದಾಪುರ ಹೇಳಿದ್ದಾರೆ
ಭಾನುವಾರ ಸಂಜೆ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದಾಪುರ ಗ್ರಾಮದ ಬಸವನ ಮಹಾಮನೆಯಲ್ಲಿ
ಬೌದ್ಧ ಧರ್ಮದ ನವಯಾನ ಪಂಥ ಡಾ. ಬಿ.ಆರ್. ಅಂಬೇಡ್ಕರ್ ರವರು ಬೌದ್ಧ ಧರ್ಮದ ದೀಕ್ಷೆ ಪಡೆದ ದಿನ ಅಕ್ಟೋಬರ್ 14- 1956 ಬೌದ್ಧ ಧರ್ಮದ ದೀಕ್ಷೆ ದಿನಾಚರಣೆ. ಕಾರ್ಯಕ್ರಮದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗುವ ಮೂಲಕ ಪುಷ್ಪಾರ್ಚನೆ ಮಾಡಿ ಮಾತನಾಡಿ ಅವರು. ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರಧಾರೆಗಳ ತಿಳಿದು ನಾವು ಜ್ಞಾನಿಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಇವತ್ತು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಿನ 1935 ರಲ್ಲಿ ಹಿಂದುವಾಗಿ ಹುಟ್ಟಿದ್ದೇನೆ ಆದರೆ ನಾನು ಹಿಂದುವಾಗಿ ಸಾಯುವುದಿಲ್ಲ ಏಕೆಂದರೆ ಜಾತಿ ಅಸಮಾನತೆಯ ಅಸ್ಪೃಶ್ಯತೆ ಮಹಿಳೆಯರಿಗೆ ಮತ್ತು ದಲಿತರಿಗೆ ಸೂಕ್ತ ಸ್ಥಾನಮಾನ ಇರಲಿಲ್ಲ ದೇಶದ ಪ್ರತಿಯೊಬ್ಬ ಮಹಿಳೆಯರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಅವರು ಹಿಂದೂ ಕೋಡ್ ಬಿಲ್ ತರಲಿಲ್ಲ ಅಂದಿದ್ರೆ ಮಹಿಳೆಯರಿಗೆ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸದೃಢರಾಗಲು ಸಾಧ್ಯವಿರಲಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಬುದ್ಧ ಬಸವ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುವ ಅಂತ ಕೆಲಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ವಾಸುದೇವ ಸರಸ್ವತಿ ಸ್ವಾಮೀಜಿ,ಗ್ರಾ.ಪಂ. ಎಂ.ಪಾಲಯ್ಯ, ಗ್ರಾಮಸ್ಥರಾದ ದಾಸರಬೋರಯ್ಯ,
ಪಾಪನಾಯಕ, ಮಂಜುನಾಥ್ ಸ್ವಾಮಿ ನಾಯಕ ಅಖಿಲ ಬೋರಣ್ಣ ಚಳ್ಳಕೆರೆ, ಪ್ರೊಫೆಸರ್ ಡಾ. ನಾಗರಾಜ್ ಕಾಟವ್ವನಹಳ್ಳಿ, ಪ್ರಕಾಶ್ ಕುದಾಪುರ, ಜಿ.ಬಿ. ಲೋಕೇಶ್, ಜಿ.ಬಿ. ಬೋರಣ್ಣ ಹಾಗೂ ಕುಟುಂಬಸ್ಥರು ಕುದಾಪುರ ಗ್ರಾಮಸ್ಥರು ಇದ್ದಾರೆ