ಚಳ್ಳಕೆರೆ :

ಚಳ್ಳಕೆರೆ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಅವರು ಚಳ್ಳಕೆರೆ ತಾಲೂಕಿನ ಚಿತ್ರದುರ್ಗ ರಸ್ತೆ ಹಾಗೂ ಸೋಮಗದ್ದು ರಸ್ತೆ ಸಮೀಪದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ , ಇನ್ನೂ ಕಾಮಗಾರಿ ಮಾಡುವ ಸಂದರ್ಭದಲ್ಲಿ ಮಳೆಯ ನೀರು ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಒಳ ಕಾಲುವೆಯ ಮಾರ್ಗ ಕಿರಿದಾಗಿದ್ದು ಮಳೆಯ ನೀರು ಮುಂದಕ್ಕೆ ಸಾಗದೆ ನಿಂತಲ್ಲಿಯೇ ನಿಂತು ಸಂಪೂರ್ಣವಾಗಿ ರಸ್ತೆಗೆ ಹಾಕಿರುವ ಮಣ್ಣು ಜಾರುವ ಹಂತದಲ್ಲಿ ಇದೆ .

ಇನ್ನೂ ಈ ಅವಜ್ಞಾನಿಕ ಕಾಮಗಾರಿಯಿಂದ ಮುಂದೆ ದೊಡ್ಡ ಅನಾಹುತ ಸಂಭವಿಸಬಹುದು ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಈ ಮಳೆಯ ನೀರನ್ನು ಮುಂದಕ್ಕೆ ಹೋಗುವ ಹಾಗೆ ಮಾಡಿ,

ರಸ್ತೆ ದ್ವಿಭಾಜಕ ಸ್ಲಾಬ್ ಅನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿ ಇಳಿಜಾರಿನಲ್ಲಿ ಮಣ್ಣು ಜಾರುವುದನ್ನು ತಡೆದು ನಿಲ್ಲಿಸಿ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಯನ್ನು ಮುಂದುವರಿಸಬೇಕು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ

Namma Challakere Local News

You missed

error: Content is protected !!