ಲೋಕ ಕಲ್ಯಾಣಕ್ಕಾಗಿ ಶಾರದಾಶ್ರಮದಲ್ಲಿ ದುರ್ಗಾ ಹೋಮ.ಹಾಗೂ ದುರ್ಗಾದೇವಿ ಕುರಿತು ಪ್ರವಚನ.

ಚಳ್ಳಕೆರೆ :
ಜನರಿಗೆ ಇರುವ ಕಷ್ಟ ಗಳು ಪರಿಹಾರವಾಗಲಿ,ಉತ್ತಮ ಮಳೆ ಬಂದು ಉತ್ತಮ ಬೆಳೆಯಾಗಿ ನಾಡಿನ ಜನರಿಗೆ ಅರ್ಥಿಕ ಸಂಕಷ್ಟ ಪರಿಹಾರವಾಗಲಿ ಲೋಕಕಲ್ಯಾಣವಾಗಿ ಹಾಗೂ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶಾರದಾಶ್ರಮದಲ್ಲಿ ಇಂದು ನಾಗಶಯನ ಗೌತಮ್ ಇವರ ನೇತೃತ್ವದಲ್ಲಿ ಹೋಮ, ಹವನ ಹಾಗೂ ದುರ್ಗಾದೇವಿ ಕುರಿತು ಪ್ರವಚ ನ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಎಂದು ಶ್ರೀಶಾರದಾಶ್ರಮದ ಮಾತಾಜಿ ತ್ಯಾಗಮಯಿ ಹೇಳಿದರು.

ನಗರದ ವಾಸವಿ ಕಾಲೋನಿಯ ಶಾರದಾಶ್ರಮದಲ್ಲಿ ಇಂದು ದುರ್ಗಾದೇವಿ ಕುರಿತ ಪ್ರವಚನ ಹಾಗೂ ದುರ್ಗಾದೇವಿ ಹೋಮ ಕಾರ್ಯಕ್ರಮದಲ್ಲಿ ಮಾತನಾಡಿ,

ಕಷ್ಟ ಬಂದಾಗ ಮಾತ್ರ ನಾವು ದೇವರ ಮೊರೆ ಹೋಗುತ್ತೆವೆ. ಎಲ್ಲಾ ಸಮಯದಲ್ಲಿ ದೇವಿಯನ್ನ ನೆನೆದು ತಮ್ಮ ಕಾರ್ಯಗಳು ಸುಗಮವಗಾಗಿ ನಡೆಯುತ್ತದೆ.ಅತ್ಯಂತ ಶಕ್ತಿ ಶಾಲಿಯಾದ ದೇವತೆ ಎಂದರೆ ದುರ್ಗಾ ದೇವಿ.

ದುಷ್ಟರ ನಿಗ್ರಹ ಹಾಗೂ ಶಿಷ್ಟರ ರಕ್ಷಣೆಗಾಗಿ ಸದಾ ಸಿದ್ಧಳಾಗಿರುವ ಮಾತೆ ಎಂದು ಕರೆಯಲಾಗುವುದು. ಪುರಾಣದ ಕಥೆ ಹಾಗೂ ನಂಬಿಕೆಯ ಪ್ರಕಾರ ದೇವಲೋಕದಲ್ಲಿ ಬರುವ ಅನೇಕ ಸಮಸ್ಯೆಗಳು ಹಾಗೂ ರಕ್ಷಣೆಯ ವಿಚಾರದಲ್ಲಿ ದೇವಿಯ ಮೊರೆ ಹೋಗುತ್ತಿದ್ದರು ಎಂದು ಹೇಳಲಾಗುವುದು.

ದೇವಿಯು ಮುನಿದರೆ ಮಾರಿಯ ಅವತಾರವನ್ನು ತೋರುವಳು. ಅದೇ ಅವಳನ್ನು ಸಂತಸ ಪಡಿಸಿದರೆ ತನ್ನ ಮಗುವನ್ನು ಪೋಷಿಸಿದಂತೆ ರಕ್ಷಣೆ ನೀಡುವಳು ಎನ್ನುವ ನಂಬಿಕೆ ಇದೆ.ಸೃಷ್ಟಿಯ ವೈಭವಗಳು ಹಾಗೂ ಅಗತ್ಯತೆಗಳು ಎಲ್ಲವೂ ದೇವಿಯ ಕೃಪೆಯಿಂದ ಸೃಷ್ಟಿಯಾಗಿದೆ.

ತಾಯಿಯ ಆರಾಧನೆ ಹಾಗೂ ಭಕ್ತಿಯನ್ನು ಹೊಂದಿದ್ದರೆ ಜೀವನದಲ್ಲಿ ಬಯಸಿದ ಸಂಗತಿಗಳು ಹಾಗೂ ಮನಸ್ಸಿನ ಬಯಕೆಗಳೆಲ್ಲವೂ ಬಹಳ ಸುಲಭವಾಗಿ ದೊರೆಯುವುದು ಎಂದು ಹೇಳಲಾಗುವುದು.

ನಾವು ಮಾಡುವ ಕೆಲಸ ಕಾರ್ಯಗಳ ಮೇಲೆ ದೇವಿಯ ದೃಷ್ಟಿಯಿರುತ್ತದೆ. ಕೆಟ್ಟ ಕೆಲಸವನ್ನು ಮಾಡಿದರೆ ಶಿಕ್ಷೆ ಹಾಗೂ ಉತ್ತಮ ಕೆಲಸಕ್ಕೆ ಪುಣ್ಯವನ್ನು ನೀಡುವಳು. ಜೀವನದಲ್ಲಿ ಸನ್ನಡತೆಯಲ್ಲಿ ಸಾಗುವುದು ಹೇಗೆ ಎನ್ನುವುದನ್ನು ಕಲಿಸಿಕೊಡುವಳು ಎಂದು ಹೇಳಲಾಗುವುದು ಇಂತಹ ಮಾತದುರ್ಗವ್ವ ದೇವಿಯ ಹೋಮ ಎಂದು ಶಾಶ್ವಸ್ತ್ರವಾಗಿ ನಡೆದಿದೆ ಎಂದರು.

ದುರ್ಗಾದೇವಿ ಹೋಮ ಕಾರ್ಯಕ್ರಮವನ್ನು ವೇದಬ್ರಹ್ಮ ನಾಗಶಯನ ಗೌತಮ್ ನೆಡಸಿ ಮಾತನಾಡಿ,ಮಾತಾಜಿ ತ್ಯಾಮಯಿಯವರು ಲೋಕ ಕಲ್ಯಾಣಕ್ಕಾಗಿ ಉತ್ತಮವಾದ ಕಾರ್ಯಗಳ ಮಾಡಿಕೊಂಡು ಬರುತ್ತಿದ್ದು,ಇಂದು ದುರ್ಗ ಹೋಮ ನಾಡಿನಲ್ಲಿ ಉತ್ತಮ ಮಳೆ ಯಾಗಲಿ ಕೆರೆಗಳು ಕಟ್ಟೆಗಳು ತುಂಬಿ ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ನೀರು ಸಿಗಲಿ ಉತ್ತಮ ಮಳೆ ಬೆಳೆಯಾಗಲಿ ಜನರ ಸುಭಿಕ್ಷತೆಯಿಂದ ಇರಲಿ ಎನ್ನುವ ಕಾಣದಿಂದ ಹೋಮ ಹವನ ದೇವತಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಬಕ್ತರಾದ ಯತೀಶ,ರವಿಚಂದ್ರ, ರಮೇಶ, ಬಳ್ಳಾರಿಯ ಕುಮಾರಸ್ವಾಮಿ,ಶ್ರೀಧರ್,ಶಿವಾನಿ,ಶ್ರೀಲಕ್ಷ್ಮಿ,ಶಾಲಿನಿ,ಡಾ.ಸಾಯಿಜ್ಯೋತಿ, ಇತರರು ಇದ್ದರು.

About The Author

Namma Challakere Local News
error: Content is protected !!