ಚಳ್ಳಕೆರೆ :
‘ಒಳ ಮೀಸಲು ಜಾರಿ ಮಾಡಿ, ಇಲ್ಲವೇ ಖುರ್ಚಿ ಖಾಲಿ
ಮಾಡಿ, ನೆಪಗಳನ್ನು ಹೇಳುತ್ತಾ ಒಳ ಮೀಸಲು ಜಾರಿ
ಮಾಡದಿದ್ದಲ್ಲಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ
ಪಾಠಕಲಿಸುತ್ತೇವೆ’ ಎಂದು ಒಳಮೀಸಲು ಹೋರಾಟಗಾರರು
ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡರು ಸೇರಿ ಒಳಮೀಸಲಾತಿ ಜಾರಿಗಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು, ಒಳ
ಮೀಸಲು ಜಾರಿ ವಿಳಂಬ ಧೋರಣೆ ಅನುಸರಿಸುತ್ತಿರುವ
ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ಎಲ್ಲ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಕೂಡ ದಲಿತ
ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಡಿ’ ಎಂದು
ಗುಡುಗಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್ ಕುಮಾರ್
ಮಾತನಾಡಿ, ನಮಗಾಗಿ ಅಲ್ಲ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಳ ಮೀಸಲು ಕೆಳುತ್ತಿದ್ದೆವೆ, ಒಳಮೀಸಲು ಜಾರಿ ವಿಷಯದಲ್ಲಿ ಮೂರು
ದಶಕಗಳಿಂದ ನಮ್ಮ ಹೋರಾಟ ಮಾಡುತ್ತಲೆ ಬಂದಿದ್ದೆವೆ ಆದರೆ ಒಂದು ದೇಶದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದಾಗಿದೆ ಆದರೆ ಅದನ್ನು ಜಾರಿ ಮಾಡಲು ಯಾಕೆ ಮೀನಮೇಷ ಎಂದರು.
ಮಾದಿಗ ಮಹಾ ಸಭಾ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ನಮ್ಮ ಹೋರಾಟದ ರೂಪ ರೇಷಿ ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿ ಕೈಗೊಂಡ ತೀರ್ಮಾನದಂತೆ ಮಾಡಲಾಗುತ್ತದೆ,
ಕಳೆದ ಹಲವು ವರ್ಷಗಳಿಂದ
ಎಲ್ಲ ಪಕ್ಷಗಳೂ ಮೋಸ ಮಾಡಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಮೇಲೆ ಅಪಾರ
ನಂಬಿಕೆ ಇದೆ. ಒಳ ಮೀಸಲು ಜಾರಿ ಮಾಡಿ ನಂಬಿಕೆ
ಉಳಿಸಿಕೊಳ್ಳುತ್ತೀರಾ? ಮೋಸ ಮಾಡುತ್ತೀರಾ? ಸುಪ್ರೀಂ
ಕೋರ್ಟ್ ಹೇಳಿರುವುದರಿಂದ ನೆಪ ಹೇಳದೇ ಜಾರಿ ಮಾಡಿ’
ಎಂದು ಆಗ್ರಹಿಸಿದರು.
ನಿವೃತ್ತ ಅಧಿಕಾರಿ, ಮಾದಿಗ ಸಮುದಾಯದ ಮುಖಂಡ ದಯಾನಂದ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ
ನಿಮ್ಮ ವಾಗ್ದಾನ, ಪ್ರಣಾಳಿಕೆ ನಂಬಿ
ನಂಬಿ ಕಾಂಗ್ರೆಸ್‌ನ್ನು
ಬೆಂಬಲಿಸಿದ್ದೇವೆ. ಒಳ ಮೀಸಲು ಜಾರಿ ಮಾಡದಿದ್ದರೆ ನಿಮ್ಮ
ಅಹಂಕಾರಕ್ಕೆ ಕಾರಣವಾಗಿರುವ ಅಧಿಕಾರವೇ ಇಲ್ಲದಂತೆ
ಮಾಡುತ್ತೇವೆ. ಮುಂಬರುವ ಉಪ ಚುನಾವಣೆಗಳಲ್ಲೇ ಪಾಠ
ಕಲಿಸುತ್ತೇವೆ. ನಮಗೆ ನಮ್ಮ
ಆತ್ಮಾಭಿಮಾನವೇ ಮುಖ್ಯ’ ಎಂದು ಎಚ್ಚರಿಸಿದರು.
ಇದೇ ಸಂಧರ್ಭದಲ್ಲಿ ದ್ಯಾವ್ರಹಳ್ಳಿ ಸುರೇಶ್, ಮಾದಿಗ ದಂಡೋರ ತಾಲೂಕ ಅಧ್ಯಕ್ಷ ತಿಪ್ಪೇಸ್ವಾಮಿ, ಚೆನ್ನಿಗರಾಮಯ್ಯ, ಹಳೆ ಟೌನ್ ವೀರಭದ್ರಪ್ಪ , ಮೈತ್ರಿ ದ್ಯಾಮಯ್ಯ, ಹೊನ್ನೂರ ಸ್ವಾಮಿ,, ದ್ಯಾವರನಹಳ್ಳಿ ಆನಂದ , ಪ್ರಕಾಶ್, ಹೊನ್ನೂರಸ್ವಾಮಿ, ಮಾರಣ್ಣ , ಬಸವರಾಜ್, ತಿಪ್ಪೇಸ್ವಾಮಿ, ಇನ್ನು ಹಲವು ಪ್ರಮುಖ ಮುಖಂಡರು ಭಾಗವಹಿಸಿದ್ದರು