“ಚಳ್ಳಕೆರೆಯ ಶ್ರೀಶಾರದಾಶ್ರಮದಲ್ಲಿ ನವರಾತ್ರಿ ಸಂಭ್ರಮ”
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ನವರಾತ್ರಿಯ ಪ್ರಯುಕ್ತ ಶ್ರೀಮತಿ ಸುಮ ಪ್ರಕಾಶ್ ಮತ್ತು ಸಂಗಡಿಗರು ಶ್ರೀಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಪಠಣ ಮತ್ತು ವಿಶೇಷ ದೇವಿ ಭಜನೆಗಳನ್ನು ನಡೆಸಿಕೊಟ್ಟರು.
ಈ ಭಜನಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ, ಶ್ರೀಶಾರದಾಶ್ರಮದ ಸದ್ಭಕ್ತರಾದ ಸುಮ ಪ್ರಕಾಶ್, ಗೀತಾ, ನಾಗರಾಜ್,ಲತಾ, ನಿರ್ಮಲ,ಮಂಗಳ, ವೀಣಾ, ಯತೀಶ್ ಎಂ ಸಿದ್ದಾಪುರ, ಗೀತಾ, ಯಶೋಧಾ ಪ್ರಕಾಶ್,ಕವಿತಮ್ಮ, ರತ್ನಮ್ಮ, ಮಂಜುಳ ನಾಗರಾಜ್,ಪಂಕಜ,ಭಾರತಿ, ಮಂಜುನಾಥ,ಉಷಾ ಶ್ರೀನಿವಾಸಲು, ಚೇತನ್,ವಿದ್ಯಾ ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.