ಧಾರಾಕಾರ ಮಳೆಗೆ ಗುಂತಕೋಲಮ್ಮನಹಳ್ಳಿಯ ರೈತ ಗಾದ್ರಿಪಾಲಯ್ಯರವರ ಮೆಕ್ಕೆಜೋಳ ಜಲವೃತ.
ನಾಯಕನಹಟ್ಟಿ:: ಬಯಲುಸೀಮೆ ಬರದ ನಾಡು ಎಂಬ ಅಣೆಪಟ್ಟಿ ಕಟ್ಟಿಕೊಂಡಿರುವ ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದ ಸ. ನಂ. 117 ರ. ರೈತ ಗಾದ್ರಿಪಾಲಯ್ಯ ಬಿನ್ ಕರೆ ಬೋರಯ್ಯ ರವರ ಜಮೀನಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ 2. ಎಕರೆ ಮೆಕ್ಕೆಜೋಳ ಜಮೀನಿನಲ್ಲಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಇದೆ ವೇಳೆ ರೈತ ಗಾದ್ರಿಪಾಲಯ್ಯ ಮಾತನಾಡಿ ಶುಕ್ರವಾರ ತಡರಾತ್ರಿ ಬಾರಿ ಮಳೆಯಿಂದಾಗಿ ನಮ್ಮ ಜಮೀನಿನಲ್ಲಿ 2. ಎಕರೆ ಮೆಕ್ಕೆಜೋಳ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಸಾಲ ಮಾಡಿ ಗೊಬ್ಬರ ಬೀಜ ತಂದು ಬಿತ್ತನೆ ಮಾಡಿದೆ ಕಾಳು ಕಟ್ಟುವ ಹಂತದಲ್ಲಿದ್ದ ಮೆಕ್ಕೆಜೋಳ ಜಲಾವೃತಗೊಂಡಿದೆ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಪರಿಹಾರವನ್ನು ನೀಡಿದರೆ ಕಳೆದ ಐದು ಆರು ಬಾರಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು ಸಹ ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರೈತರಾದ ಮಲ್ಲಿಕಾರ್ಜುನ್, ಮಂಜುನಾಥ, ಇದ್ದರು.