ಚಳ್ಳಕೆರೆ : ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠ ಐಮಂಗಲ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಬಸವ ಜಯಂತಿ, ಬುದ್ದ ಜಯಂತಿ, ಹರಳಯ್ಯ ಜಯಂತಿ, ಬಾಬು ಜಗಜೀವನ್ ರಾಮ್ ಜಯಂತಿಗಳನ್ನು ಚಿತ್ರದುರ್ಗ ಶ್ರೀ ಮುರುಗಾಮಠದಲ್ಲಿ ಮೇ.31 ರಂದು ಆಚರಿಸಲಾಗುವುದು
ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜ ಸೇವೆಗಲ್ಲಿ ಸೇವೆ ಸಲ್ಲಿಸಿದ ಗಣ್ಯ ಮಾನ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಆದ್ದರಿಂದ ತಾಲೂಕಿನ ಎಲ್ಲಾ ಸಮುದಾಯದ ಜನರು ಆಗಮಿಸಿಬೇಕಾಗಿದೆ ಎಂದು ಮಹಾ ಶಿವಶರಣ ಹರಳ್ಯ ಗುರುಪೀಠದ ಹರಳಯ್ಯ ಸ್ವಾಮೀಜಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ವೀರಭದ್ರಯ್ಯ, ಮಾಜಿ ತಾಪಂ.ಮಾಜಿ ಅಧ್ಯಕ್ಷ ರಂಗಸ್ವಾಮಿ, ಗಿರಿಯಪ್ಪ, ಪ್ರಗತಿಪರ ರೈತ ಆರ್.ಎ.ದಯಾನಂದ, ಕರಿಯಪ್ಪ, ಉಮೇಶ್‌ಚಂದ್ರ ಬ್ಯಾನರ್ಜಿ, ಪರಮೇಶ್, ಶಪಿವುಲ್ಲಾ, ಪಿರ್ದೋಸ್, ತಿಪ್ಪೇಸ್ವಾಮಿ, ದ್ಯಾಮೇಣ್ಣ ಮೈತ್ರಿ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಆನಂದ್, ಗಂಗಾಧರ್, ದ್ಯಾಮಣ್ಣ, ತಿಪ್ಪೆಸ್ವಾಮಿ, ಇತರರು ಪಾಲ್ಗೊಂಡಿದ್ದರು.