ಚಳ್ಳಕೆರೆ :
ಮನೆಮೆನೆಗೆ ಕುಡಿಯುವ ನೀರಿನ ಜೆಜೆಎಂ ಪೈಪ್ ಲೈನ್ ಪ್ರಾಯೋಗಿಕ ಬಿಟ್ಟ ನೀರು ಮೂರರಿಂದ ನಾಲ್ಕು ಹಿಂಚುನೀರು ಕಳೆದ ಮೂರು ದಿನಗಳಿಂದ ವ್ಯರ್ಥವಾಗಿ ಹರಿಯುತ್ತಿವೆ.
ಚಳ್ಳಕೆರೆ ತಾಲೂಕಿನ ತಳಕು ತಿಮ್ಮಣ್ಣನಹಳ್ಳಿ ತಾಂಡ ಹಟ್ಟಿ ಸಮೀಪ ವಿನಃ ಕಾರಣ ವ್ಯರ್ಥವಾಗಿ ಹರಿಯುತ್ತಿವೆ.
ಇದರಿಂದ ಪಕ್ಕದಲ್ಲಿ ಇರುವ ತೊಗರಿ ಹೊಲದಲ್ಲಿ ತುಂಬಿ ಹರಿಯುತ್ತಿದೆ, ಬೆಳೆ ನಷ್ಟದಲ್ಲಿ ರೈತ ಕಂಗಾಲಾಗಿದ್ದಾನೆ.
ವಾಸಿಸುವ ಮನೆ ಅಂಗಳ ಕೂಡ ಕೆಸರು ಗದ್ದೆಯಂತಾಗಿದೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು, ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮದ ಸಾರ್ವಜನಿಕ ಅನಿಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನದರೂ ವ್ಯರ್ಥವಾಗಿ ಹರಿಯುವ ಕುಡಿಯುವ ನೀರನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.