ತಡ ರಾತ್ರಿ ಸುರಿದ ಭಾರಿ ಮಳೆಗೆ ಎನ್ ದೇವರಹಳ್ಳಿ ಗ್ರಾಮದ ಎ.ಕೆ ಕಾಲೋನಿಯ ಮನೆಗಳಿಗೆ ನೀರು ನುಗಿ ಜಲಾವೃತ
ನಾಯಕನಹಟ್ಟಿ::ಅ.5. ವರ್ಣದೇವನ ಅಬ್ಬರಕ್ಕೆ ಸಮೀಪದ ಎನ್ ದೇವರಹಳ್ಳಿ ಎ.ಕೆ ಕಾಲೋನಿಯ 5-8 ಮನೆಗಳಿಗೆ
ನೀರು ನುಗ್ಗಿ ಜಲ ವೃತಗೊಂಡಿವೆ.

ಇನ್ನೂ ಗ್ರಾಮದ ನಿವಾಸಿ ಜಯಣ್ಣ ಮಾತನಾಡಿದರು. ನಮ್ಮ ಮನೆಗಳು ತಗ್ಗು ಪ್ರದೇಶದಲ್ಲಿ ಇದ್ದು ಮನೆಗಳಿಗೆ ಪ್ರತಿ ಸಾರಿ ಮಳೆ ಬಂದರೆ ನೀರು ನುಗ್ಗಿ, ಮನೆಯಲ್ಲಿರುವ ದವಸಾ ಧಾನ್ಯಗಳು ನೀರಲ್ಲಿ ಮುಳುಗಿ ಹೋಗುತ್ತವೆ. ಇದುವರೆಗೂ ಗ್ರಾ.ಪಂ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಧ್ವನಿ ಎತ್ತಿ ಮಾತನಾಡುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಮಗೆ ಸಮಸ್ಯೆಯನ್ನು ಪರಿಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಕೂರಲಾಗುವುದೇ ಎಂದರು

ಇದೇ ಸಂದರ್ಭದಲ್ಲಿ ಎ.ಕೆ. ಕಾಲೋನಿಯ ನಿವಾಸಿಗಳಾದ ಬೋರಕ್ಕ ,ಮಾರಕ್ಕ, ಲಕ್ಷ್ಮೀದೇವಿ, ಗಿರಿಜಮ್ಮ, ಕರಿಬಸಮ್ಮ, ಮಲ್ಲಕ್ಕ , ಕೋಟೇಶ್, ಲಿಂಗರಾಜ್, ಅಪ್ಪು, ಬಸವರಾಜ್, ಶಂಕರಣ್ಣ, ಇದ್ದರು

About The Author

Namma Challakere Local News
error: Content is protected !!