ಚಳ್ಳಕೆರೆ : ಈಡೀ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳೆ ಪರಿಹಾರವನ್ನು ಚಳ್ಳಕೆರೆ ತಾಲೂಕಿನ ರೈತರಿಗೆ ಕೊಡಿಸುವ ಮೂಲಕ ರಾಜ್ಯಕ್ಕೆ ಮಾದರಿಯಾದ ತಹಶಿಲ್ದಾರ್ ರೇಹಾನ್ ಪಾಷಗೆ ರಾಜ್ಯ ಸರಕಾರ ಈ‌ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ 2024 ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ನಗರಸಭೆ ಸದಸ್ಯ ಎಂ.ಮಲ್ಲಿಕಾರ್ಜುನ ಹೇಳಿದರು.

ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ 2024 ಪ್ರಶಸ್ತಿಗೆ ಭಾಜನರಾದ ತಾಲೂಕು ದಂಡಧಿಕಾರಿಗಳಿಗೆ ಲೇಖನಿ ನೀಡುವುದರ ಮೂಲಕ ಅಭಿನಂದಿಸಿ ನಂತರ ಮಾತನಾಡಿದ ಅವರು

ಈಡೀ ಜಿಲ್ಲೆಯಲ್ಲಿ ಮಾದರಿ ತಾಲ್ಲೂಕಿನ್ನಾಗಿಸಿದ ಕಿರ್ತಿ ಇಲ್ಲಿನ ತಹಶಿಲ್ದಾರ್ ಗೆ ಸಲ್ಲುತ್ತದೆ, ಆಡಳಿತ ವೈಖರಿಯಲ್ಲಿ ಹಾಗೂ ಸಾರ್ವಜನಿಕರ ಒಡನಾಟ ಹಾಗೂ ಅವರ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರಿಸಿದ್ದಾರೆ. ಇನ್ನೂ ದಾರಿ ಸಮಸ್ಯೆಗಳನ್ನು ಮುಕ್ತ‌ ಮಾಡುವಲ್ಲಿ ಪಣ ತೊಟ್ಟಿದ್ದಾರೆ ಇನ್ನೂ ಇವರ ಸೇವೆ ನಮಗೆ ಅಗತ್ಯ, ಇವರ ಕಾರ್ಯಕ್ಕೆ ಇನ್ನೂ ಹೆಚ್ಚಿನ ಹುದ್ದೆಗಳು ಲಬಿಸಲಿ , ಸಾರ್ವಜನಿಕರ ‌ಸೇವೆಗೆ ತಮ್ಮನ್ನು ಮುಡುಪಾಗಿರಿಸಲಿ ಎಂದು ಆತ್ಮಿಯವಾಗಿ ಸನ್ಮಾನಿಸಿದರು.

ಇನ್ನೂ  ಜಿಲ್ಲೆಯಲ್ಲಿ ‌ಉತ್ತಮ‌ ಆಡಳಿತ ವೈಖರಿ ಹಾಗೂ ಕಾಲ ಕಾಲಕ್ಕೆ ಜನರಿಗೆ ಉತ್ತಮವಾದ ಆಡಳಿತ ನೀಡುತ್ತಿರುವ, ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುತ್ತಿರುವ ಜಿಲ್ಲಾಧಿಕಾರಿ ವೆಂಕಟೇಶ್ ರವರಿಗೂ ವರ್ಷದ ಅತ್ಯುತ್ತಮ ಅಧಿಕಾರಿಗಳು ಎಂಬ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದರು.

ಇದೇ ಸಂಧರ್ಭದಲ್ಲಿ ನಾಟಕಕಾಡೆಮಿ ಪುರಸ್ಕೃತ ಪಿಟಿ.ತಿಪ್ಪೇಸ್ವಾಮಿ, ಕಸಪಾ ತಾಲೂಕು ಅಧ್ಯಕ್ಷ ವೀರಭದ್ರಸ್ವಾಮಿ, ಎಲ್ ಐ ಸಿ.ತಿಪ್ಪೇಸ್ವಾಮಿ, ಸಿಟಿ.ವೀರೇಶ್, ಇತರರು ಇದ್ದರು.

About The Author

Namma Challakere Local News
error: Content is protected !!