ಚಳ್ಳಕೆರೆ : ನಗರದಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪಣತೊಟ್ಟ ಖಾಕಿ ಪಡೆಗೆ ಇಂದು ಹೊರ ಜಿಲ್ಲೆಯ ಮೂರು ಜನ ಕಳ್ಳರು ಖಾಕಿ ಪಡೆಗೆ ಶರಣಾಗಿದ್ದಾರೆ.


ಹೌದು ಈಗಾಗಲೇ ಕಳ್ಳತನ ಪ್ರಕರಣಗಳನ್ನು ದಾಖಲು ಮಾಡಿಕೊಂಡ ಖಾಕಿ ಪಡೆ ನಗರದಲ್ಲಿ ಹದ್ದಿನ ಕಣ್ಣು ಇಟ್ಟಿದ್ದರು ಎನ್ನಲಾಗಿದೆ ಇಂತಹ ಸಮಯದಲ್ಲಿ ನಗರದ ಕೆಎಸ್.ಆರ್.ಟಿಸಿ.ಬಸ್ ನಿಲ್ದಾಣದಲಿ ಅನುಮಾನಷ್ಪದವಾಗಿ ತಿರುಗಾಡುವ ಶಿವಣ್ಣ 50 ವರ್ಷ ಹಮಾಲಿ ಕೆಲಸ, ಹೆಂದೊರೆ ಗ್ರಾಮ, ಗೌಡಗೆರೆ ಹೋಬಳಿ, ಶಿರಾ ತಾಲೂಕ್, ತುಮಕೂರು ಜಿಲ್ಲೆ, ಆನಂದ 42 ವರ್ಷ, ಚೀಲ ಹೊಲೆಯುವ ಕೆಲಸ, ಗಾಂಧಿ ನಗರ, 12ನೇ ಕ್ರಾಸ್, ತಮಿಳು ಕಾಲೋನಿ ತಿಪಟೂರು ತಾಲೂಕ್ ತುಮಕೂರುಜಿಲ್ಲೆ, ಇವರ ಕಳೆದ ಮೇ.10ರಂದು ಚಳ್ಳಕೆರೆ ನಗರದ ವಿಠಲ್ ನಗರದ ಮನೆಯೊಂದರಲ್ಲಿ ರಾತ್ರಿ ಸಮಯದಲಿ ಕಳ್ಳತನ ಮಾಡಿದ್ದು ಈ ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದು
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಪರುಶುರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಚಳ್ಳಕೆರೆ ಡಿವೈಎಸ್ಪಿ ಕೆ.ವಿ.ಶ್ರೀಧರ್ ರವರ ಮಾರ್ಗದರ್ಶನದಲ್ಲಿ, ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜೆ.ಎಸ್.ತಿಪ್ಪೇಸ್ವಾಮಿ, ಹಾಗೂ ಪಿ.ಎಸ್.ಐ ಕೆ.ಸತೀಶ್‌ನಾಯ್ಕ ಹಾಗೂ ಸಿಬ್ಬಂದಿಗಳಾದ ಶ್ರೀನಿವಾಸ್, ಹಾಲೇಶ, ಸತೀಶ್. ಮಂಜುನಾಥ ಮುಡಕೆ, ಗಿರಿಯಮ್ಮ ಇವರುಗಳ ತಂಡದ ಶೀಘ್ರ ಕಾರ್ಯಚರಣೆಯಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡುವ ಕಾರ್ಯದಲ್ಲಿ ಯಶಶ್ವಿಯಾಗಿದ್ದಾರೆ.


ಮನೆಯಲ್ಲಿ ಕಳ್ಳತನ ಮಾಡಿದ್ದ ಆಭರಣಗಳನ್ನು ಅನಿತಾ 35ವರ್ಷ, ಖಾಸಗಿ ಶಾಲೆಯಲ್ಲಿ ಆಯಾ ಕೆಲಸ, ಸೋಮಗುದ್ದು ರಸ್ತೆ, ಗಾಂಧಿ ನಗರ, ಚಳ್ಳಕೆರೆ ಟೌನ್, ಇವರು ಕಳ್ಳರ ಜೊತೆ ಸೇರಿ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿರುತ್ತಾರೆ,
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸು.2.70 ಲಕ್ಷ ಮೌಲ್ಯದ ಬಂಗಾರದ ಆಭರಣ, ಸುಮಾರು 1ಕೆ.ಜಿ ತೂಕದ ಬೆಳ್ಳಿ ಆಭರಣಗಳು ಸು.95ಸಾ. ಮೌಲ್ಯದ ವಸ್ತುಗಳನ್ನು ಇವರಿಂದ ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


ಈ ಕಾರ್ಯವನ್ನು ಮೆಚ್ಚಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಪರುಶುರಾಮ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಪತ್ತೆ ಮಾಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

About The Author

Namma Challakere Local News
error: Content is protected !!