ಚಳ್ಳಕೆರೆ : ಅಪೌಷ್ಠಿಕತೆಯಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುವುದರಿಂದ ಆರೋಗ್ಯವನ್ನು ಸುಧಾರಣೆಗೆ ತರಬಹುದು ಎಂದು ತಾಲೂಕು ಆರೋಗ್ಯ ವೈಧ್ಯಾಧಿಕಾರಿ ಡಾ.ಕಾಶಿ ಹೇಳಿದ್ದಾರೆ.

ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಹಾಗೂ ಜಿಲ್ಲಾ ಆರೋಗ್ಯ, ಸುರಕ್ಷಾ ಪಾಲಿ ಕ್ಲಿನಿಕ್, ಹಾಗೂ ಆಯುಷ್ ಇಲಾಖೆ , ಆರ್ ಬಿ ಎಸ್ ಕೆ.ತಂಡದಿಂದ ಆಯೋಜಿಸಿದ್ದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುಬಾರದು ಆದ್ದರಿಂದ ಇತಂಹ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ತಪಾಸಣೆ ಮಾಡಿಸುವ ಮೂಲಕ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಸುಮಾರು ನಾಲ್ಕು ಹೋಬಳಿಗಳ ಸಮುದಾಯದ ಆರೋಗ್ಯ ಕೇಂದ್ರಗಳಿಂದ ಸುಮಾರು 23 ಮಕ್ಕಳು ತೀವ್ರ ಅಪೌಷ್ಟಿಕತೆ ಬಳಲುತ್ತಿರುವ ಮಕ್ಕಳ ಜೊತೆಗೆ‌ ಸ್ಯಾಮ್ ಹಾಗೂ ಮ್ಯಾಮ್ ಹೊಂದಿರುವ ಸುಮಾರು 80 ಮಕ್ಕಳು ಈ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಸುರಕ್ಷಾ ಪಾಲಿ ಕ್ಲಿನಿಕ್ ಮುಖ್ಯಸ್ಥ ಪರೀದ್ ಖಾನ್ ಮಾತನಾಡಿ ಮಕ್ಕಳ ಬೆಳವಣಿಗೆ ಬಗ್ಗೆ ‌ಪೋಷಕರು‌ ನಿಗಾ ವಹಿಸಬೇಕು ಅವರಿಗೆ ಕೇವಲ ಪಾಸ್ಟ್ ಪುಡ್ ನೀಡದೇ ಪೌಷ್ಠಿಕ ಆಹಾರ ನೀಡುವ ಮೂಲಕ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.

ಈದೇ ಸಂಧರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ.ವೆಂಕಟೇಶ್, ಡಾ.ಗೀತಾ, ಡಾ.ಸಂದೀಪ್, ಡಾ.ರಮೇಶ್, ಡಾ.ಮಂಜುನಾಥ್, ಆರೋಗ್ಯ ಸಹಾಯಕ ತಿಪ್ಪೇಸ್ವಾಮಿ, ಪ್ರೇಮ್ ಕುಮಾರ್, ಸಿಡಿಪಿಓ ಅಧಿಕಾರಿ ಕೃಷ್ಣಾಪ್ಪ, ಸಹಾಯಕ ಅಧಿಕಾರಿ ನವೀನ್, ಶ್ರೂಷಕಿಯರಾದ ಪಾರಿಜಾತ, ಚೈತ್ರ, ಅಕ್ಷತಾ, ರೇಖಾ, ಅಮೃತಾ, ರಾಜು, ರೇಷ್ಮಿ, ಮಂಜುಳಾ, ಹಾಗೂ ಅಂಗನವಾಡಿ ಮೇಲ್ವಿಚಾರಕಿಯರು ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!