ಚಳ್ಳಕೆರೆ: ನಗರದ ಬಿಇಓ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗ್ಯಾಸ್ ಸೋರಿಯಾಗಿ ಅವಘಡ ಸಂಭವಿಸಿದ್ದು
ಮೂರು ಜನ ಅಡಿಗೆ ತಯಾರಕರಿಗೆ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇಂದು ಅಡುಗೆ ತಯಾರಿಸುವಾಗ ಗ್ಯಾಸ್ ಪೈಪ್ ನಲ್ಲಿ ಸೋರಿಕೆಯಾಗಿ ಅಡುಗೆ ತಯಾರು ಮಾಡುತ್ತಿದ್ದ ಮೂರು ಜನರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದ್ದು,
ಅಲ್ಲಿದ್ದವರು ಬೆಂಕಿ ನಂದಿಸಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದ್ದಾರೆ.
ಗಾಯಳುಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.