ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಿ ನಿಕಟಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ.
ನಾಯಕನಹಟ್ಟಿ:: ಗಾಂಧೀಜಿ ಶಾಂತಿ ಆಹಿಂಸೆ ಸತ್ಯದ ಹರಿಕಾರ ಸರದಾರ ಭಾರತ ದೇಶದ ರಾಷ್ಟ್ರಪಿತ ಎಂದು ನಿಕಟಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಕಾರ್ಯಕ್ರಮದ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ಜಾತೀಯತೆ ಹಾಗೂ ಅಸ್ಪೃಶ್ಯತೆ ನಿರ್ವಹಣೆಗೆ ಶ್ರಮಿಸಿದರು ಎಲ್ಲರೂ ಗಾಂಧೀಜಿಯವರ ತತ್ವ ಸಿದ್ಧಾಂತ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಗಾಂಧೀಜಿ ಈ ದೇಶಕ್ಕೆ ನೀಡಿದ ಕೊಡುಗೆ ಸಾಹಿತ್ಯ ಕೊಡುಗೆ ತತ್ವಗಳು ಬೋಧನೆ ಸ್ವಾತಂತ್ರ ಹೋರಾಟ ಸಿದ್ದಾಂತಗಳು ಎಲ್ಲಾ ರೀತಿಯ ಕೊಡುಗೆಗಳಿಂದ ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದರು.
ಇದೇ ವೇಳೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು ದೇಶದಲ್ಲಿ ನಾವೆಲ್ಲರೂ ಸ್ವತಂತ್ರವಾಗಿ ಬದುಕಲು ಮಹಾತ್ಮ ಗಾಂಧೀಜಿ ಅಂತ ಮಹನೀಯರು ಶ್ರಮಿಸಿದ್ದಾರೆ. ಬ್ರಿಟಿಷರಿಂದ ಸ್ವತಂತ್ರ ಪಡೆಯಬೇಕು ಎಂದು ಪಣತೊಟ್ಟು ಮೊದಲ ಸ್ವತಂತ್ರ ಹೋರಾಟಗಾರ ಎಂಬ ಹೆಗ್ಗಳಿಕೆ ಗಾಂಧೀಜಿಯವರಗಿದೆ ಮುಯ್ಯಿ ಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು ಎಂದು ಅವರು ನಂಬಿದ್ದರು ವಿಶೇಷ ಅಂದ್ರೆ ಗಾಂಧೀಜಿಯನ್ನು ಶಾಂತಿ, ಅಹಿಂಸೆಗಳ ಅಧಿಕಾರ ಸತ್ಯದ ಸರ್ದಾರ ಭಾರತ ದೇಶದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ ಆದ್ದರಿಂದ ಭಾರತೀಯ ಪ್ರತಿಯೊಬ್ಬ ಪ್ರಜೆಯು ಇಂತಹ ಮಹಾನಿರನ್ನು ಹೊರಸುವಂತ ದಿನವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಸಹ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಕೆ ಎಂ ನಾಗರಾಜ್, ಪ್ರಾಂಶುಪಾಲರಾದ ಶ್ರೀನಿವಾಸ್ ಉಪ ಪ್ರಾಚಾರ್ಯರಾದ ಬಿ ಆರ್ ರಮೇಶ್. ಶಿಕ್ಷಕಿ ತಿಪ್ಪಮ್ಮ ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು