ಎನ್ ದೇವರಹಳ್ಳಿ ಗ್ರಾ. ಪಂ. ಸ್ವಚ್ಛ ಸಂಕೀರ್ಣ ಘಟಕಕ್ಕೆ ಚಾಲನೆ ನೀಡಿದ ಅಧ್ಯಕ್ಷೆ ಸರಿತಾ ರಾಜನಾಯ್ಕ.
ನಾಯಕನಹಟ್ಟಿ:: ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಎಂದು ಅಧ್ಯಕ್ಷೆ ಸರಿತಾ ರಾಜನಾಯ್ಕ ಹೇಳಿದ್ದಾರೆ.
ಬುಧವಾರ ಸಮೀಪದ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮದ ಹೊರವಲಯದಲ್ಲಿರುವ ನೂತನ ಸ್ವಚ್ಛ ಸಂಕೀರ್ಣ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬ ಮನುಷ್ಯನಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆ ಮತ್ತು ಪರಿಸರಕ್ಕೆ ಮೊದಲು ಆದ್ಯತೆ ನೀಡಬೇಕು. ಆದ್ದರಿಂದ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳ ತಮ್ಮ ತಮ್ಮ ಮನೆಯ ಕಸವನ್ನು ಬೀದಿಗೆ ಚೆಲ್ಲದೆ ಹಸಿ ಕಸ ಮತ್ತು ಒಣ ಕಸ ವನ್ನಾಗಿ ಬೇರ್ಪಡಿಸಿ ಕಸದ ವಾಹನಕ್ಕೆ ಹಾಕಿ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್ ಸಿದ್ದಪ್ಪ ,ಆರ್ ಬಸವರಾಜ್, ಅಕ್ಕಮ್ಮ ರಾಜಣ್ಣ, ಸೂರಮ್ಮ ಶಂಕರ್ ಮೂರ್ತಿ, ಪಿಡಿಒ ಕೆ.ಒ. ಶಶಿಕಲಾ. ಬಿಲ್ ಕಲೆಕ್ಟರ್ ಎಂ.ಬಿ.ರಘು, ಸಂತೋಷ್ ಕಾರ್ಯದರ್ಶಿ ಎಸ್.ಆರ್ ಚಿದಾನಂದ್, ದ್ವಿತೀಯ ದರ್ಜೆ ಸಹಾಯಕ ವಿಶ್ವನಾಥ್, ಹಾಗೂ ಸಿಬ್ಬಂದಿ ವರ್ಗ ಇದ್ದರು