ನೇರಲಗುಂಟೆ ಗ್ರಾ.ಪಂ ಯಲ್ಲಿ ವಿಜೃಂಭಣೆಯಿಂದ 155ನೇ ಗಾಂಧಿ ಜಯಂತಿ ಆಚರಣೆ ಅಧ್ಯಕ್ಷೆ ಎಂ.ಸುಷ್ಮಾ ಸುರೇಶ್ ನಾಯಕ,
ನಾಯಕನಹಟ್ಟಿ:: ಮಹಾತ್ಮ ಗಾಂಧೀಜಿ ಶಾಂತಿ ಸತ್ಯ ಅಹಿಂಸೆಗಳ ಮೂಲಕ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ ಎಂದು ನೇರಲಗುಂಟೆ ಗ್ರಾ. ಪಂ ಅಧ್ಯಕ್ಷೆ ಎಂ. ಸುಷ್ಮಾ ಸುರೇಶ್ ನಾಯಕ ಹೇಳಿದ್ದಾರೆ.
ಬುಧುವಾರ ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ 155ನೇ ಗಾಂಧಿ ಜಯಂತಿ ಆಚರಣೆಯಲ್ಲಿ ಅವರು ಪಾಲ್ಗೊಂಡು ಮಹಾತ್ಮ ಗಾಂಧೀಜಿ ರವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ಪೂಜೆ ಸಲ್ಲಿಸಿ ಮಾತನಾಡಿದರು ಮಹಾತ್ಮ ಗಾಂಧೀಜಿ ರವರ ಆದರ್ಶಗಳನ್ನು ಭಾರತೀಯ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ತಮ್ಮ ಶಾಂತಿ ಸತ್ಯ ಅಹಿಂಸೆಗಳ ಮೂಲಕ ದೇಶದಲ್ಲಿ ಸ್ವಾತಂತ್ರ ಚಳುವಳಿಗೆ ಹೊಸ ರೂಪ ನೀಡಿದವರು ಕರ್ನಾಟಕದಲ್ಲಿ ಬ್ರಿಟಿಷರನ್ನು ಭಾರತವನ್ನು ಬಿಟ್ಟು ತೊಲಗಿ ಎಂಬ ಘೋಷಣೆ ಪ್ರಭಾವದಿಂದ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರವನ್ನು ತಂದು ಕೊಟ್ಟಂತಹ ಮಹಾನ್ ಸಂತ ಮಹಾತ್ಮ ಗಾಂಧೀಜಿ ಎಂದರು.
ಇನ್ನೂ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಎನ್ ಬಿ ವೀರನಾಯಕ ಮಾತನಾಡಿದರು ಮಹಾತ್ಮ ಗಾಂಧೀಜಿಯವರ ತಂದೆ ಮೋಹನ್ ದಾಸ್ ಕರ್ಮ ಚಂದ್ರ ಗಾಂಧಿ ತಾಯಿ ಪುತ್ತಲೀಬಾಯಿ ರವರ ಮಗನಾಗಿ 1869ರ ಅಕ್ಟೋಬರ್ 2.ರಂದು ಗುಜರಾತಿನ ಪೋರ್ ಬಂದರ್ ನಲ್ಲಿ ಜನಿಸಿದವರು ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನು ಮುಡಪಾಗಿಟ್ಟಂತಹ ಮಹಾತ್ಮರು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದುರುಗಮ್ಮ ನಾಗಭೂಷಣ್, ಸದಸ್ಯರಾದ ಎ.ಒ.ಗೋಪಾಲ್ ನಾಯಕ, ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಭೀಮನಕೆರೆ ಪಾಲಯ್ಯ, ಪಿಡಿಒ ಹನುಮಂತ ಕುಮಾರ್, ಸಿಬ್ಬಂದಿ ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ, ಕಂಪ್ಯೂಟರ್ ಆಪರೇಟರ್ ಎನ್ ಸಿ ಅಶ್ವಿನಿ, ವಿ ಆರ್ ಡಬ್ಲ್ಯೂ ರಮೇಶ್, ತಿಮ್ಮಣ್ಣ, ಪಾತಲಿಂಗಪ್ಪ, ತಿಪ್ಪೇಸ್ವಾಮಿ ಗೌಡ್ರು, ಲತಮ್ಮ ರತ್ನಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.