ಗಾಂಧಿ ತತ್ವಗಳು ಕೇವಲ ಜಯಂತಿಗೆ ಸೀಮಿತಾಗದಿರಲಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಮಹಾತ್ಮ ಗಾಂಧಿಯವರು ಸರಳ ಹಾಗೂ ಸಜ್ಜನಿಕೆ ಬದುಕು ರೂಪಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸರಳವ್ಯಕ್ತಿ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣೆವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂದಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ವಿಶ್ವದಲ್ಲಿ ಒಬ್ಬರೇ ಮಹಾತ್ಮರು ಅವರೇ ಮಹಾತ್ಮ ಗಾಂಧಿಯವರು, ದೇಶದ ರಾಷ್ಟ್ರಪಿತವೆಂದು ಬಿಂಬಿತವಾದ ಗಾಂಧೀಜಿಯವರು ವಿಶ್ವಮಾನವರಾಗಿ ಹೊರಹೊಮ್ಮಿದ್ದಾರೆ, ಇಂದು ದೇಶ ವಿದೇಶಗಳಲ್ಲಿ ಅವರ ನಡೆತೆ ಅಳವಡಿಸಿಕೊಂಡಿದರು ಎಂದರು.

ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಗಾಂಧಿ ಜಯಂತಿಯನ್ನು ಬರೀ ಜಯಂತಿಗೆ ಸೀಮಿತವಾಗಿಸದೆ ನಗರ ಹಾಗೂ ಗ್ರಾಮೀಣ ನೈರ್ಮಲ್ಯ ಕಾಪಾಡುವ ದೃಷ್ಠಿಯಿಂದ ಸ್ವಚ್ಚತಾ ಆಂದೋಲನ ಜೊತೆ ಜೊತೆಗೆ ಗಾಂಧೀಜಿಯವರ ಆದರ್ಶ ತತ್ವ ಸಿದ್ದಾಂಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಗಾಂಧಿಜಯಂತಿ ಆಚರಣೆಗೆ ಅರ್ಥ ಬರುತ್ತದೆ, ಅವರು‌ಹಾಕಿ ಕೊಟ್ಟ ಮಾರ್ಗದಲ್ಲಿ ಇಂದು ಎಲ್ಲಾರೂ ನಡೆಯುವಂತಾಗಿದೆ‌ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ರೆಹಾನ್ ಪಾಷಾ, ಡಿವೈಎಸ್ಪಿ ರಾಜಣ್ಣ, ನಗರಸಭೆ ಅಧ್ಯಕ್ಷರಾದ ಜೈತುನ್ ಬೀ, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ಸದಸ್ಯರುಗಳು, ತಾಲ್ಲೂಕು ಪಂಚಾಯತ್ ನಾಮ ನಿರ್ದೇಶನ ಸದಸ್ಯರುಗಳು, ನಗರಸಭೆ ನಾಮ ನಿರ್ದೇಶನ ಸದಸ್ಯರುಗಳು, ಮುಖಂಡರು, ಕಾರ್ಯಕರ್ತರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!