ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಕುರುಡಿಹಳ್ಳಿ ಸಮೀಪ ಸುಮಾರು ೯ ಎಕರೆ ಪ್ರದೇಶದಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಪಶುಸಂಗೋಪನೆ ಇಲಾಖೆ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದವತಿಯಿಂದ ಆಯೋಜಿಸಿದ್ದ ನೂತನ ಗೋಶಾಲೆಗೆ ಭೂಮಿ ಪೂಜೆ ಶಾಸಕ ಟಿ.ರಘುಮೂರ್ತಿ ನೆರವೇರಿಸಿ ಮಾತನಾಡಿದರು.
ರೈತರು ಕೃಷಿ ಚಟುವಟಿಗಳ ಜತೆಗೆ ಗೋವುಗಳನ್ನು ಸಾಕಾಣಿಗೆಯಿಂದ ಸಗಣಿ ಗೊಬ್ಬರವನ್ನು ಭೂಮಿಗೆ ಹಾಕುವುದರಿಂದ ಫಲವತ್ತತೆ ಹೆಚ್ಚುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಮೇವಿನ ಕೊರತೆಯಿಂದ ಜಾನುವಾರುಗಳು ಕಣ್ಮರೆಯಾಗುತ್ತಿದ್ದು ರೈತರು ಇಂತ ಗೋಶಾಲೆಗಳನ್ನು ಸದುಪಯೋಗಪಡಿಸಿಕೊಂಡು ಗೋ ಸಂತತಿ ಉಳಿಸುವಂತೆ ಕಿವಿಮಾತು ಹೇಳಿದ್ದಾರೆ.
ಸತತ ಬರಗಾಕ್ಕೆ ತುತ್ತಾಗುವ ರೈತರು ಜಾನುವಾರುಗಳ ರಕ್ಷಣೆಗೆ ರೈತರಿಗೆ ದೊಡ್ಡ ಸಂಕಷ್ಟವಾಗಿದ್ದು ಸರಕಾರ ಹಾಗೂ ಜನಪ್ರತಿನಿಧಿಗಳ ನೆರವಿನೊಂದಿಗೆ ತಾತ್ಕಾಲಿಕವಾಗಿ ಗೋಶಾಲೆ ಮಾಡುವ ಮೂಲಕ ರೈತರ ಜಾನುವಾರುಗಳಿಗೆ ಸಹಾಯ ಮಾಡಲಾಗುತ್ತಿತ್ತು ಆದರೆ ಇಲ್ಲಿ ಗೋ ಹತ್ಯೆ ನಿಶೇದ ಕಾಯ್ದೆಯಡಿಲ್ಲಿ ಖಾಯಂ ಗೋಶಾಲೆ ತೆರೆಯುತ್ತಿದ್ದು ರೈತರು ಗೋವುಗಳನ್ನು ಸಾಕಲು ಸಾಧ್ಯವಾಗದೆ ಇರುವಾಗ ಇಲ್ಲಿ ಬಿಡಬಹುದು.
ರೈತರು ಗೋವುಗಳ ಸಂತತಿ ಉಳಿಸಲು ಗೋಶಾಲೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಗೋಶಾಲೆ ಉದ್ಘಾಟನೆಗೆ ಸೀಮಿತವಾಗಬಾರದು ನಿಗಧಿತ ಸಮಯದೊಳಗೆ ಗೋಶಾಲೆ ಪ್ರಾರಂಭಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆಯಡಿಯಲ್ಲಿ ಸರಕಾರ ಜಿಲ್ಲೆಗೊಂದು ಗೋಶಾಲೆ ಎಂದು ನಿಗಧಿ ಮಾಡಿತ್ತು ಈಗ ರಾಜ್ಯದಲ್ಲಿ ನೂರು ಗೋಶಾಲೆಗಳನ್ನು ಪ್ರಾರಂಭಿಸಬೇಕು ಎಂಬ ಸರಕಾರದ ಉದ್ದೇಶದಿಂದ ಜಿಲ್ಲೆಗೆ ನಾಲ್ಕು ಗೋಶಾಲೆಗಳು ಮಂಜುರಾತಿಯಾಗಿವೆ.
ಬಿಡಾಡಿ ದನಗಳು, ಕಸಾಯಿಖಾನೆಯಿಂದ ವಶಪಡಿಸಿಕೊಂಡ ಹಾಗೂ ರೈತರು ಸಾಕಲು ಆಗದೆ ಇರುವ ವಯಸ್ಸಾದ ಜಾನುವಾರುಗಳನ್ನು ತಂದು ಬಿಡಬಹುದು, ಪಶುಸಂಗೋಪನೆ ಹಾಗೂ ಪ್ರಾಣಿದಯಾ ಸಂಘದವತಿಯಿಂದ ಪಾಲನೆ ಫೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಶುಸಂಗೋಪನೆ ನಿದೇರ್ಶಕ ಕಲ್ಲಪ್ಪ, ರೈತ ಮುಖಂಡ ಸೋಗುದ್ದು ರಂಗಸ್ವಾಮಿ, ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಮಾತನಾಡಿದರು. ಮಾಜಿ ತಾಪಂ ಅಧ್ಯಕ್ಷ ತಿಪ್ಪೇಸ್ವಾಮಿ,ತಾಪಂ. ಸಹಾಯಕ ನಿರ್ದೇಶಕ ಸಂತೋಷ್ , ಸಹಾಯಕ ಪಶುಸಂಗೋನೆ ನಿರ್ದೇಶಕ ರೇವಣ್ಣ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ಅಶೋಕ್, ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ವಿರುಪಾಕ್ಷಪ್ಪ, ಕಂದಾಯ ನಿರೀಕ್ಷಕ ಲಿಂಗೇಗೌಡ ಸೇರಿದಂತೆ ರೈತರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.