ಗೌರಸಮುದ್ರ ಮಾರಮ್ಮ ದೇವಿಯ ಮರಿ ಪರೀಶೆ ಸಂಪನ್ನ
ಐತಿಹಾಸಿಕ ಚರಿತ್ರೆವುಳ್ಳ ಮಾರಿ ಜಾತ್ರೆ ಇಂದು ಸಾವಿರಾರು ಭಕ್ತರು ಸಮ್ಮುಖದಲ್ಲಿ ಜರುಗಿತು.
ಚಳ್ಳಕೆರೆ : ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ.
ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆಗೆ ಸಲ್ಲುತ್ತದೆ.
ಈ ಜಾತ್ರೆಗೆ ವಿಶೇಷವಾದ ಈ ಭಾಗದಲ್ಲಿ ಪ್ರತಿ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಶಕ್ತಿ ಈ ದೇವಿಗಿದೆ ಎನ್ನುತ್ತಾರೆ. ಈ ದೇವಿಗೆ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ.
ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಬಳಿ ಇರುವ ತುಮ್ಮಲು ಎಂಬ ಪ್ರದೇಶದಲ್ಲಿ ಮಾರಮ್ಮನ ಜಾತ್ರ ಎಂದು ಮರಿ ಜಾತ್ರೆ ಜರುಗಿತು.
ಸಾವಿರಾರು ಭಕ್ತರು ತಮ್ಮ ಹರಕೆಯನ್ನು ತೀರಿಸುತ್ತಾ ಎತ್ತು ಹಾಗು ಹಸುಗಳನ್ನು ದೇವಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಈರುಳ್ಳಿ, ಕೋಳಿ, ತರಕಾರಿ ತೂರುವ ಮೂಲಕ ಹರಕೆ ತೀರಿಸಿದರು.