ಚಳ್ಳಕೆರೆ : ಸಾಹಿತ್ಯ ಬದುಕಿನಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿ ಗೆ ಒತ್ತು ನೀಡಬೇಕು ಎಂದು ಸಂಸ್ಥಾಪಕರಾದ ದಯಾ ಪುತ್ತುರ್ಕರ್ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ಹದಿನೆಂಟನೆಯ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು,
ನಂತರ ಎಲ್ಲ ಜಾತಿ ಧರ್ಮಗಳನ್ನು ಮೀರಿದ್ದು ಈ ಸಾಹಿತ್ಯ ಅನೇಕ ಹಿರಿಯ ಸಾಹಿತಿಗಳು ಈ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಬಿ. ಕೆ ರಹಮತ್ ಉಲ್ಲಾ ರವರು ಸ್ಮರಿಸಿದರು.
ಖ್ಯಾತ ವಕೀಲರು ಹಾಗೂ ವೇದಿಕೆಯ ಗೌರವಾಧ್ಯಕ್ಷ ಬಿ.ಕೆ ರಹಮತ್ ವುಲ್ಲ ಮತ್ತು ವೇದಿಕೆ ಮೇಲಿರುವ ಎಲ್ಲ ಗಣ್ಯರಿಂದ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಿನ್ಮುಲಾದ್ರಿ ಸಿರಿ ಶಿಕ್ಷಕ ಪ್ರಶಸ್ತಿಯನ್ನು ಡಾ.ಏಚ್.ಎಸ್ ಶಫಿ ಉಲ್ಲಾ ರವರಿಗೆ ನೀಡಿ ಸನ್ಮಾನಿಸಲಾಯಿತು ಹಾಗೂ ಈ ವರ್ಷದ ವೇದಿಕೆ ಸಾಧಕರು ಎಂಬ ಪ್ರಶಸ್ತಿಯನ್ನು ಸತ್ಯ ಪ್ರಭಾ ವಸಂತ್ ಕುಮಾರ್ ರವರಿಗೆ ನೀಡಿ ಗೌರವಿಸಲಾಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಡಾ.ಕೆ.ಎಂ ವೀರೇಶ್, ಶೋಭಾ ಮಲ್ಲಿಕಾರ್ಜುನ್, ಪ್ರಕಾಶಕರು ಆದ ರಾಜು.ಎಸ್ ಸೂಲೇನ ಹಳ್ಳಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಆದ ಶ್ರೀ ಶಿವಮೂರ್ತಿ.ಟಿ ಕೋಡಿಹಳ್ಳಿ, ಡಾ.ನವೀನ್ ಸಜ್ಜನ್, ಶಿವಾನಂದ್ ಬಂಡೆ ಮೆಗಳಹಳ್ಳಿ, ವಿನಾಯಕ್, ಕೆ. ಟಿ ಶಾಂತಮ್ಮ, ಕೆ.ಎಸ್ ತಿಪ್ಪಮ್ಮ, ಸತೀಶ್ ಕುಮಾರ್, ಮುದ್ದು ರಾಜ್,ಪ್ರವೀಣ್,ವೀರೇಶ್, ಶಿವರುದ್ರಪ್ಪ, ಸಾದತ್, ಹಿರಿಯ ಸಾಹಿತಿಗಳು ಕೊರ್ಲ ಕುಂಟೆ ತಿಪ್ಪೇಸ್ವಾಮಿ, ಸುಮಾ ರಾಜ್ ಶೇಖರ್, ಮೀರಾ ನಾಡಿಗ್, ಜಯದೇವ್ ಮೂರ್ತಿ, ಶಾರದಾ ಜೈರಾಮ್, ತಿಪ್ಪೀರಮ್ಮ, ಉಷಾ ರಾಣಿ, ರಾಜೇಶ್ವರಿ ಶ್ರೀಧರ್, ನಾಗೇಂದ್ರಪ್ಪ,ಬಸವರಾಜ್ ಹರ್ತಿ, ನಿರ್ಮಲ,ಮೆಹಬೂಬ್,ಸವಿತಾ ಮುದ್ಗಲ್, ಬೆಳಕು ಪ್ರಿಯ ಹಾಗೂ ಎಲ್ಲ ಸಾಹಿತ್ಯ ಆಸಕ್ತರು, ಕಲಾವಿದರು,ಕವಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!