ಸಮಸ್ಯೆಗಳ ತಾಣವಾದ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ.
ನಾಯಕನಹಟ್ಟಿ : ಪಟ್ಟಣದ ಸಮುದಾಯ ಕೇಂದ್ರದಲ್ಲಿ ಹತ್ತು ಹಲವು ಸಮಸ್ಯೆಗಳಿವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್ ರವಿಕುಮಾರ್ ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ತಾಯಿಗಾಗಲಿ, ಮಗುವಿಗಾಗಲಿ, ಒಂದು ಒಳ್ಳೆಯ ಮಾತ್ರೆ ಇಲ್ಲ, ಆಸ್ಪತ್ರೆಯ ಸುತ್ತಲೂ ಸ್ವಚ್ಛತೆ ಇಲ್ಲ, ಸಮುದಾಯ ಕೇಂದ್ರದಲ್ಲಿ ಎರಡು ಡೀಸೆಲ್ ಜನರೇಟರ್ ಇದ್ದು ಸುಮಾರು 15 ರಿಂದ 20 ಲಕ್ಷ ಬೆಲೆಬಾಳುತ್ತವೆ. ಆದರೆ ಸರಿಯಾಗಿ ನಿರ್ವಹಣೆ ಮಾಡದೆ ಒಂದು ವರ್ಷದಿಂದ ಡೀಸೆಲ್ ಕೂಡ ಹಾಕಿಸದಿರುವುದರಿಂದ ಚಾಲನೆ ಕೂಡ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ನಂತರ ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್ ಮಾತನಾಡಿ ರಾತ್ರಿ ಪಾಳಿಯಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ, ಇಂದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಣ್ಣ ಸಣ್ಣ ಮಕ್ಕಳು ವೃದ್ಧರು ರೋಗಿಗಳನ್ನು ವಾಪಸ್ ಕಳಿಸಿದ್ದಾರೆ.ವಿದ್ಯುತ್ ಇಲ್ಲದಿದ್ದರಿಂದ ಲ್ಯಾಬ್ ನಲ್ಲಿರುವ ಯಂತ್ರೋಪಕರಣಗಳು ಕಾರ್ಯನಿರ್ವಹಿಸುತ್ತಿಲ್ಲ, ಯುಪಿಎಸ್ ಇದ್ದರೂ ಕೂಡ ಬಳಸಿಕೊಳ್ಳುತ್ತಿಲ್ಲ, ಮರಣೋತ್ತರ ಪರೀಕ್ಷೆಯ ಕೋಣೆಯಲ್ಲಿ ಸರಿಯಾಗಿ ಸ್ವಚ್ಛತೆ ಇಲ್ಲ,ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಅಲ್ಲಿ ದುರ್ವಾಸನೆಯಿಂದ ಕೂಡಿದೆ, ಎಂದು ಪ್ರಶ್ನಿಸಿದ್ದಕ್ಕೆ.
ತಾಲೂಕು ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇದೆ ರಾತ್ರಿ ಪಾಳಿಯಲ್ಲಿ ತುರ್ತು ಚಿಕಿತ್ಸೆ ಮಾತ್ರ ಎಂಬ ಉದಾಸೆ ಉತ್ತರವನ್ನು ನೀಡಿದರು.
ಈ ಕುರಿತಂತೆ ಹಲವು ಬಾರಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡರು ಇತ್ತ ಕಡೆ ತಿರುಗಿ ಸಹ ನೋಡಿಲ್ಲ ಆದ್ದರಿಂದ ಜಿಲ್ಲಾಧಿಕಾರಿಗಳು, ಮೊಳಕಾಲ್ಮೂರು ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ನಮ್ಮ ಮನವಿಯನ್ನು ಆಲಿಸಿ ಇಲ್ಲಿನ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕೆಂದು ಬೇಡಿಕೊಂಡರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ ಮುಖ್ಯ ಅಧಿಕಾರಿ ಓ ಶ್ರೀನಿವಾಸ್. ಸುರೇಶ್. ಟಿ ಟಿ ತಿಪ್ಪೇಸ್ವಾಮಿ. ಕರವೇ ಹೋಬಳಿ ಅಧ್ಯಕ್ಷ ಮುತ್ತಯ್ಯ. ನಗರ ಘಟಕ ಅಧ್ಯಕ್ಷ ರಾಘವೇಂದ್ರ. ಆಫ್ರೋಜ್ ಬಾಷಾ. ಶಿವಮೂರ್ತಿ. ಇನ್ನೂ ಮುಂತಾದವರು ಹಾಜರಿದ್ದರು.