ಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದ ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾದ ಸೌಮ್ಯ ಮಾತನಾಡಿ.

ಸರ್ಕಾರದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಅನೇಕ ಸೌಲಭ್ಯಗಳು ಕಲ್ಪಿಸಿದ್ದು ವ್ಯಾಪಾರಿಗಳು ಸದುಪಯೋಗಪಡಿಸಿಕೊಂಡು ಬೀದಿಬದಿ ವ್ಯಾಪಾರಿಗಳ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು

ವ್ಯಾಪಾರಸ್ಥರು ಸದಾ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿದ್ದು ಪಟ್ಟಣ ಪಂಚಾಯತಿಯಲ್ಲಿ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ನಂತರ ಪಟ್ಟಣ ಪಂಚಾಯತಿಯ ಸಂಘಟನಾ ಅಭಿಯಂತರರಾದ ಪಿ ಬಸಣ್ಣ ಮಾತನಾಡಿ ಬೀದಿಬದಿ ಮತ್ತು ತಳ್ಳುಗಾಡಿಯ ವ್ಯಾಪಾರಿಗಳಿಗೆ ವಿವಿಧ ಯೋಜನೆಗಳನ್ನು ಡೇ-ನಲ್ಮ್ 2014ರ ಕಾಯ್ದೆಯಡಿ ಯೋಜನೆ ಸರ್ಕಾರ ಜಾರಿಗೆ ತಂದಿದ್ದು ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಸಮಿತಿ ರಚಿಸಿಕೊಂಡು ವ್ಯಾಪಾರಿಗಳು ಪಟ್ಟಣ ಪಂಚಾಯತಿಯಲ್ಲಿ ದಾಖಲಾತಿಗಳ ನೀಡಿ ಗುರುತಿನ ಚೀಟಿ ಪಡೆದುಕೊಂಡು ಸರ್ಕಾರ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದು ಬೀದಿ ಬದಿ ವ್ಯಾಪಾರಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಣ ಅಧಿಕಾರಿ ಎನ್.ರುದ್ರಮುನಿ, ನಾಗರತ್ನ ಸಮುದಾಯ ಸಂಘಟಕರು,

ಬೀದಿ ಬದಿ ವ್ಯಾಪಾರಸ್ಥರಾದ ವಿ ಪುಷ್ಪ , ನಾಗಮ್ಮ, ಖಲೀಲ್ಉಲ್ಲ, ಮಹಮ್ಮದ್ ಆರೀಫ್ ಉಲ್ಲ, ಮಂಗಳಮ್ಮ, ಹಾಫೀಜ್ ಎಂ ಡಿ ಮಾಲಶ್ರೀ ಕೆ ಬಿ ,ವಿ ಕವಿತ,ಜಿ ಎಸ್ ತ್ರಿವೇಣಿ, ಲಕ್ಷ್ಮಮ್ಮ,

ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಎಚ್ಎಮ್ ದಯಾನಂದ್, ಟಿ ತಿಪ್ಪೇಸ್ವಾಮಿ, ಶಿವಕುಮಾರ್, ಸಂದೀಪ್, ಸುರೇಶ್, ಗುಡದಯ್ಯ, ಜೆ ಮಧು, ಮಂಗಳಮ್ಮ, ಲತಾ ಮುಂತಾದವರು ಇದ್ದರು.

About The Author

Namma Challakere Local News
error: Content is protected !!