ಸಂತ್ರಸ್ತರನ್ನು ಕಾಡಿಗೆ ಬಿಟ್ಟು ಬಂದ ತಾಲೂಕು ಆಡಳಿತ
ಕೊರಚ ಸಮಾಜದ ಕುಟುಂಬಗಳನ್ನು, ತಾಲೂಕು
ಆಡಳಿತ ಕಾಡಿನಲ್ಲಿ ಬಿಟ್ಟು ಬಂದಿದೆ ಎಂದು ಕೊರಚ ಸಮಾಜದ
ಮುಖಂಡ ವೈ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ನುಲಿಯ ಚಂದಯ್ಯ ಜಯಂತಿಯಲ್ಲಿ
ಮಾತಾಡಿದರು.
ಮಳೆ ಬಂದಾಗ ಅವರು ಗುಡಿಸಲು ಹಾಕಿದ್ದು,
ಕೆರೆ ತುಂಬಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು.
ಬದಲಿಗೆ ಆ ಕುಟುಂಬಗಳನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ಇದರಿಂದ
ಅವರು ಕತ್ತಲಲ್ಲಿ ಇರಬೇಕಿದೆ. ಕುಡಿಯಲು ನೀರಿಲ್ಲ. ಶಿಕ್ಷಣ
ವಂಚಿತರಾಗಿದ್ದಾರೆಂದರು.