ಚಳ್ಳಕೆರೆ :
ಕೋಟೆ ನಾಡಿಗೆ ಬಂದ ಹಿಂದು ಮಹಾ ಗಣಪ
ಚಿತ್ರದುರ್ಗ ವಷ್ಟೆ ಅಲ್ಲೆ ಇಡೀ ರಾಜ್ಯದಲ್ಲೇ ಮನೆ ಮಾತಾಗಿರುವ
ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ
ಆಯೋಜನೆಗೊಳ್ಳುವ ಹಿಂದು ಮಹಾ ಗಣಪತಿಯು ಚಿತ್ರದುರ್ಗಕ್ಕೆ
ಬಂದಿದೆ.
ದೊಡ್ಡ ಬಳ್ಳಾಪುರದಿಂದ ಚಿತ್ರದುರ್ಗಕ್ಕೆ ಲಾರಿಯಲ್ಲಿ
ತರಲಾಯಿತು. ಹೆದ್ದಾರಿ ರಸ್ತೆ ಮೊದಲಿಗೆ ಶ್ರೀ ಮಾದಾರ
ಗುರುಪೀಠಕ್ಕೆ ಕರೆ ತಂದಿದ್ದು, ಅಲ್ಲಿ ಗಣಪನಿಗೆ ಪೂಜಿಸಿ ಬರ
ಮಾಡಿಕೊಳ್ಳಲಾಯಿತು.
ನಂತರ ಅಲ್ಲಿಂದ ಬಿಡಿ ರಸ್ತೆಯಲ್ಲಿರುವ
ಗಣಪತಿ ಮಂಟಪಕ್ಕೆ ಗರುಢಾ ರೂಢ ಗಣಪತಿಯನ್ನು ಕರೆ
ತರಲಾಯಿತು.