ಚಳ್ಳಕೆರೆ :
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು
ಚಳ್ಳಕೆರೆಯ ಅಬ್ಬೇನಹಳ್ಳಿಯಲ್ಲಿ ದಲಿತ ಮಹಿಳೆ ಹಾಗೂ ಮಾನಸಿಕ
ಅಸ್ವಸ್ಥೆ ಮೇಲೆ ಅತ್ಯಾಚಾರ ಮಾಡಿದ್ದು, ಕೊಲೆ ಮಾಡಲಾಗಿದೆ.
ಇದರ ಬಗ್ಗೆ ಪ್ರತಿಯೊಬ್ಬ ದಲಿತ ಸಂಘಟನೆಗಳು ಧ್ವನಿ ಎತ್ತಬೇಕು
ಎಂದು ದಲಿತ ಸಂಘರ್ಷ ಪರಿವರ್ತನಾವಾದ ಸಂಘದ ಮುಖಂಡ
ಹೆಗ್ಗೆರೆ ಮಂಜುನಾಥ್ ಆಗ್ರಹಿಸಿದ್ದಾರೆ. ಅವರು ಚಳ್ಳಕೆರೆಯಲ್ಲಿ
ಮಾತಾಡಿದರು.
ಜಿಲ್ಲೆಯಲ್ಲಿ ಎಲ್ಲರೂ ತಲೆ ತಗ್ಗಿಸುವಂತಹ
ಕೆಲಸಗಳು ನಡೆಯುತ್ತಿವೆ. ಇದರಿಂದ ಕೇಂದ್ರ ಮತ್ತು ರಾಜ್ಯ
ಸರ್ಕಾರಗಳು, ಮಹಿಳೆಯರ ರಕ್ಷಣೆಗೆ ಕಾಯ್ದೆ ಜಾರಿಗೆ ತರಬೇಕು
ಎಂದರು.