ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುವ ಮೂಲಕ ನಗರ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಮಕ್ಕ ಹೇಳಿದ್ದಾರೆ.

ನಗರದ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದರು .
ನಗರದಲ್ಲಿ ಹಾದುಹೊಗುವ ರಾಜಕಾಲುವೆಗೆ 2.50 ಕೋಟಿ ಅನುದಾನ ಕೆರೆ ಅಭಿವೃದ್ಧಿಗೆ ಅನುದಾನದಲ್ಲಿ ಮೀಸಲಿಡಲಾಗಿದೆ ಎಂದು ಪೌರಾಯುಕ್ತೆ ಪಿ ಲೀಲಾವತಿ ಸಭೆಯ ಗಮನಕ್ಕೆ ತಂದಿದ್ದಾರೆ.

ನಗರಸಭೆಯ 15 ನೇ ಹಣಕಾಸಿನ ನಗರದ 31 ವಾರ್ಡ್ ಗೆ ಅನುದಾನ ಹಂಚಿಕೆ ಮಾಡುವ ಬದಲು ಕೇವಲ ಒಂದೇ ವಾರ್ಡ್ ಗೆ ಸಿಮಿತಗೊಳಿಸುವುದು ಸರಿಯಲ್ಲ ಎಂದು ಸದಸ್ಯ ವಿರೂಪಾಕ್ಷ, ಸುಮಾ, ಜಯಲಕ್ಷ್ಮಿ, ಆರೋಪ ಮಾಡಿದರು.

ನಗರಸಭೆ ನಿಧಿಯಲ್ಲಿ ನಗರದ 31 ವಾರ್ಡ್ ಗೆ ಸಮಾನವಾಗಿ ಹಂಚಿಕೆ ಮಾಡಬೇಕು ನಗರಸಭೆಗೆ ಏನಾದರೂ ಕೇವಲ ಒಂದೇ ವಾರ್ಡ್ ನ ರೆವಿನ್ಯೂ ಬರುತ್ತಾ .? ಅಥವಾ ಎಲ್ಲಾ ವಾರ್ಡ್‌ ಗಳ ಮ‌ೂಲಕ ನಲ್ಲಿ ಕಂದಾಯ, ಮನೆ ಕಂದಾಯ ಬರುತ್ತಾ ಈಗೇ ಲಕ್ಷಗಟ್ಟಲೆ ಕಂದಾಯ ಕಟ್ಟಿದ ಎಲ್ಲಾ ವಾರ್ಡ್ ಗಳಿಗೆ ಸೌಲಭ್ಯ ಅನುದಾನ ಹೊದಗಿಸಬೇಕು ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ್ ಮಾತನಾಡಿ
ಮುಖ್ಯ ರಸ್ತೆಗಳಲ್ಲಿ ಕಸ ಹಾಕುವುದರಿಂದ ನಗರದ ಅಂಧ ಅದಗೆಡುತ್ತಿದೆ, ನಗರದ ಪೌರಕಾರ್ಮಿಕರು ಪ್ರತಿನಿತ್ಯವೂ ಸ್ವಚ್ಚ ಮಾಡುತ್ತಿದ್ದಾರೆ ಆದರೆ ಕಸ‌ಮಾತ್ರ ರಸ್ತೆಗೆ‌ ಹಾಕುತ್ತಾರೆ ಇದರ ಬಗ್ಗೆ ಗಮನಹರಿಸಿ ದಂಡ ಹಾಕುವುದರ ಮೂಲಕ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿ ಎಂದು ಸದಸ್ಯ ಶ್ರೀನಿವಾಸ್ ಸಭೆಯ ಗಮನಕ್ಕೆ ತಂದರು.

ಸದಸ್ಯೆ ಕವಿತಾ ಸಭೆಯಲ್ಲಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕಳೆದ ಮೂರು ತಿಂಗಳಿಂದ ಚರಂಡಿ ಸ್ಲಾಬ್ ಹಾಕಿ ಮುಂದೆ ಕಾಮಗಾರಿ ಮಾಡದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಅಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷ್ಯ ಎಂದು ಆರೋಪಿಸಿದರು.

ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಹೆಲ್ತ್ ಚೆಕಪ್ ಮಾಡಿಸಲು‌ ಹಾಗೂ ಪೌರಕಾರ್ಮಿಕರ ಪ್ರವಾಸ ಅಧ್ಯಯನಕ್ಕೆ ಸಿಂಗಪೂರ್ ಹೊಗುವ ಪ್ರಸ್ತಾಪಕ್ಕೆ ಸದಸ್ಯರು ಒಪ್ಪಿಗೆ‌ ಸೂಚಿಸಿದರು.

ಈದೇ ಸಂಧರ್ಭದಲ್ಲಿ ಸದಸ್ಯ ಕೆ.ವೀರಭದ್ರಯ್ಯ ನಮ್ಮ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೊಗಿ ಎಂದು ಒತ್ತಾಯಿಸಿದರು.

ಪೌರಕಾರ್ಮಿಕರ ಬೆಳಗಿನ ಉಪಹಾರ ಸೇವೆನೆಗೆ‌ ನೂತನ ಸಭಾಗಂಣ ಕಟ್ಟಡ ನಿರ್ಮಾಣಕ್ಕೆ ನಾಲ್ಕು ಸ್ಥಳಗಳು ಈಗಾಗಲೇ ಅಧಿಕಾರಿಗಳು ನಿಗಧಿ‌ಮಾಡಿ ಸಭೆಯ ಗಮನಕ್ಕೆ ತಂದು ತಲಾ 30 ಲಕ್ಷ ಅನುದಾನದಲ್ಲಿ ನಿರ್ಮಿಸಲು ಸಭೆಯ ಗಮನಕ್ಕೆ ತಂದಾಗ ಸದಸ್ಯ ಮಲ್ಲಿಕಾರ್ಜುನ, ಶ್ರೀನಿವಾಸ್, ರಮೇಶ್ ಗೌಡ ನಮ್ಮ ವಾರ್ಡ್ ನಲ್ಲಿ ಕಟ್ಟಿ ಒತ್ತಡ ಹೇರಿದಾಗ ಅಧಿಕಾರಿಗಳ ಮುನ್ಸೂಚನೆಯ ನಿಗಧಿತ ಸ್ಥಳಗಳಿಗೆ ಅವಕಾಶ ಇಲ್ಲದೆ ಅಧಿಕಾರಿಗಳು ಸಮ್ಮಿತಿಸಿದ ಸ್ಥಳಗಳಿಗೆ ಒಪ್ಪಿಗೆ ಸೂಚಿಸಿದರು.

ಸದಸ್ಯ ಶ್ರೀನಿವಾಸ್, ಪ್ರಮೋದ್ ನಗರದಲ್ಲಿ ಸೋಲಾರ್ ಬಲ್ಪ್ ಅಳವಡಿಸುವ ಕಡಿಮೆ ಬೆಳಕು ಎಂದು ಬೆಂಗಳೂರಿನಲ್ಲಿ ರದ್ದು ಪಡಿಸಿದ್ದಾರೆ ಆದರೆ ಮತ್ತೆ ನಗರದಲ್ಲಿ ಅಳವಡಿಸುವುದು ಲಾಭವಿಲ್ಲ ಎಂದಾಗ ಇಂಜಿನಿಯರ್ ಲೋಕೇಶ್ ಒಂದು ತಿಂಗಳ ಕಾಲ ನೋಡಿ ಮತ್ತೆ ರದ್ದು ಮಾಡೊಣ ಎಂದು ಸಭೆಗೆ ತಿಳಿಸಿದರು..

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ,
ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ರುದ್ರನಾಯ್ಕ, ಸದಸ್ಯ
ರಾಘವೇಂದ್ರ, ಮಲ್ಲಿಕಾರ್ಜುನ, ವಿರೂಪಾಕ್ಷ, ವೈ.ಪ್ರಕಾಶ್, ವೀರಭಧ್ರಯ್ಯ, ರಮೇಶ್, ಎಸ್.ಜಯಣ್ಣ, ಶಿವಕುಮಾರ್, ವೈ.ಪ್ರಮೋದ್, ಶ್ರೀನಿವಾಸ್ ,ಸುಜಾತಾ, ಕವಿತಾ, ಸುಮಾ, ಜಯಲಕ್ಷ್ಮಿ, ನಾಗಮಣಿ, ನಿರ್ಮಾಲ, ಕವಿತಾ, ನಾಮ ನಿರ್ದೇಶನ ಸದಸ್ಯರಾದ ಜಗದಾಂಭ, ಇಂದ್ರೆಶ್, ಮನೋಜ್, ವೀರೇಶ್, ಪಾಲನಾಯಕ,

ಪೌರಾಯುಕ್ತೆ ಪಿ.ಲೀಲಾವತಿ, ಇಂಜಿನಿಯರ್ ಲೋಕೇಶ್, ವಿನಯ್, ತಿಪ್ಪೇಸ್ವಾಮಿ, ಮಹಲಿಂಗಪ್ಪ, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!