ಮಳೆಗಾಗಿ ಪ್ರಾರ್ಥಿಸಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಪೂಜೆ.

ನಾಯಕನಹಟ್ಟಿ::ಸೆ.2. ಕಡೆ ಶ್ರಾವಣ ಸೋಮವಾರದ ಪ್ರಯುಕ್ತ ದೇವಾಲಯದಲ್ಲಿ ಮೆರವಣಿಗೆ.

ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಹೊರಮಠದಲ್ಲಿ ಮಳೆಗಾಗಿ 108 ಕುಂಭಗಳ ಮೆರವಣಿಗೆ ನಡೆಯಿತು.

ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ಮಳೆಗಾಗಿ ಪ್ರಾರ್ಥಿಸಿ ವಿಶೇಷವಾದ 108 ಕೊಡಗಳ ಪೂರ್ಣ ಕುಂಭಮೇಳ ಹಾಗೂ ಕುಂಭಾಭಿಷೇಕ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಿತು.

ಕಡೆ ಶ್ರಾವಣ ಸೋಮವಾರದ ಪ್ರಯುಕ್ತ ದೇವಾಲಯದಲ್ಲಿ ಮೆರವಣಿಗೆ ನಡೆಸುವುದು ಸಂಪ್ರದಾಯ.

ಪಟ್ಟಣದ ಒಳಮಠದಲ್ಲಿ ಬೆಳಿಗ್ಗೆ ಸಕಲ ಪೂಜಾ ವಿಧಿ ವಿಧಾನಗಳ ಮೂಲಕ ದೇವಾಲಯದ ಸಾಂಪ್ರದಾಯಕ ವಾದ್ಯಗಳು ಹಾಗೂ ದೇವಾಲಯದ ಬಾವುಟದೊಂದಿಗೆ ಮೆರವಣಿಗೆ ಮೂಲಕ ಹೊರಮಠಕ್ಕೆ ಬರಲಾಯಿತು.

ನಂತರ ಪಟ್ಟಣದ ಮಹಿಳೆಯರು ಉಪವಾಸ ವೃತ ಆಚರಿಸುತ್ತಾ ಹೊರಮಠದಲ್ಲಿ ಕುಂಭ ಮತ್ತು ಕಳಸಗಳಿಗೆ ಮಹಾಪೂಜೆಯನ್ನು ನೆರೆವೇರಿಸಿದರು.
ನಂತರ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಬಂದು ತೇರು ಬೀದಿಯ ಬಳಿ ಇರುವ ಅರಳಿ ಮರಕ್ಕೆ ಸಾಮೂಹಿಕ ಪೂಜಿ ಸಲ್ಲಿಸಿದರು.
ಬಳಿಕ ಒಳಮಠದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮೂರ್ತಿಗೆ ಕುಂಭಾಭಿಷೇಕ ನೆರವೇರಿಸಲಾಯಿತು.
ದಾರಿ ಉದ್ದಕ್ಕೂ ಮಹಿಳೆಯರು ಸಕಲ ಬಿರುದಾವಳಿ ನೆನೆಯುತ್ತಾ ಸಾಗಿದರು ಮೆರವಣಿಗೆ ವೀರಭದ್ರ ಕುಣಿತ ಗೊಂಬೆ ಕುಣಿತ ವಿಶೇಷ ಮೆರಗು ತಂದವು..
ಇದೇ ವೇಳೆ ಎಂ ಮಹಾಂತೇಶ್ ದಿವಾಕರ್ ಮಠಸ್ಥರು ಮಾತನಾಡಿದರು. ಪ್ರತಿ ವರ್ಷದಂತೆ ಕಡೆ ಶ್ರಾವಣ ಮಾಸದ ಸೋಮವಾರ ಅಮಾವಾಸ್ಯೆಯ ದಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಕುಂಭಾಭಿಷೇಕ ನೆರವೇರಿಸುತ್ತಾ ಬರಲಾಗಿದೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದಂತ ಹಿರೇಕೆರೆ ಮತ್ತು ಚಿಕ್ಕಕೆರೆಗೆ ನೀರು ತುಂಬಿ ಉತ್ತಮ ಮಳೆಯಾಗಿ ನಾಡಿಗೆ ಸಮೃದ್ಧಿ ನೀಡುವಂತಾಗಲಿ ಎಂದರು.

ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಮತ್ತು ದೈವಸ್ಥರು ಬಾಬ್ತುದಾರರು ಭಕ್ತಾದಿಗಳು ಇದ್ದರು.

About The Author

Namma Challakere Local News
error: Content is protected !!